

ಬೆಂಗಳೂರು: ತುರ್ತು ವೈದ್ಯಕೀಯ ಸೇವೆ ಒದಗಿಸುತ್ತಿರುವ 108 ಆರೋಗ್ಯ ಕವಚ ಆಂಬುಲೆನ್ಸನ ನಿರ್ವಹಣೆಯಲ್ಲಿನ ನ್ಯೂನತೆ ಹಾಗೂ ಅವ್ಯವಹಾರಗಳ ಕುರಿತು ಪರಿಶೀಲನೆ ನಡೆಸಿ ಹದಿನೈದು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಜಿ.ವಿ.ಕೆ. ಇ.ಎಂ.ಆರ್.ಯ ಸಂಸ್ಥೆಯ ಒಡಂಬಡಿಕೆಯಡಿ ರಾಜ್ಯಾದ್ಯಂತ 715 ಆಂಬುಲೆನ್ಸ್‌ಗಳು ಸೇವೆ ಒದಗಿಸುತ್ತಿವೆ. ಈ ಪೈಕಿ ಕೆಲವೆಡೆ ಸಮರ್ಪಕವಾಗಿ ಸೇವೆ ಒದಗಿಸದೆ ಇರುವುದು ಹಾಗೂ ನಿರ್ವಹಣೆಯಲ್ಲಿ ನ್ಯೂನತೆ ಹಾಗೂ ಅವ್ಯವಹಾರಗಳ ಕುರಿತು ದೂರುಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.