ಗುರುರಾಜರ ಸ್ಮರಣೆ ಸುತ್ತರ್ಹ್ಯ : ಇತಿಹಾಸ ತಜ್ಞ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿಕೆ

New Project (31)
Published on

ಕಿನ್ನಿಗೋಳಿ: ಸಾಹಿತಿ ಡಾ.ಪಾದೂರು ಗುರುರಾಜ ಭಟ್ ಅದ್ಭುತ ಬರಹಗಾರ. ಅವರು ಬರೆದ ಗ್ರಂಥಗಳು ಎಲ್ಲ ಇತಿಹಾಸಕಾರರಿಗೆ, ಅಧ್ಯಯನ ಮಾಡುವವರಿಗೆ ಆಕರ ಗ್ರಂಥವಾಗಿದೆ. ಅವರ ನೆನಪು, ಸ್ಮರಣೆ ಮಾಡುವುದು ಸುತ್ತರ್ಹ್ಯ ಎಂದು ಇತಿಹಾಸ ತಜ್ಞ ಮೂಡುಬಿದಿರೆ ಡಾ.ಪುಂಡಿಕಾ ಗಣಪಯ್ಯ ಭಟ್ ಹೇಳಿದರು.

ಕಿನ್ನಿಗೋಳಿಯಲ್ಲಿ ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಡಾ.ಪಾದೂರು ಗುರುರಾಜ ಭಟ್ ಅವರ 100ರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊಡೆತ್ತೂರು ನಯನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಅಗರಿ ಎಂಟರ್‌ಪ್ರೈಸಸ್‌ನ ಅಗರಿ ರಾಘವೇಂದ್ ಭಟ್, ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು, ಹಿರಿಯ ಪತ್ರಕರ್ತ ಕೆ.ಎಲ್.ಕುಂಡಂತಾಯ, ನಿವೃತ್ತ ಪ್ರಾಧ್ಯಾಪಕ ಬಾಲಕೃಷ್ಣ ಉಡುಪ, ಕರ್ನಾಟಕ ಜಾನಪದ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಅಧ್ಯಕ್ಷೆ ಪದ್ಮಶ್ರೀ ಭಟ್, ಪಿ.ವೆಂಕಟೇಶ್ ಭಟ್, ಗುರುಪ್ರಸಾದ್ ಹೊಸಬೆಟ್ಟು, ಸತೀಶ್ ಪೂಜಾರಿ ಅಬ್ಬನಡ್ಕ, ಡಾ.ಸೋಮ ಶೇಖರ ಮಯ್ಯ, ಯುಗಪುರುಷದ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಗುರುಪ್ರಸಾದ್ ಭಟ್ ನಿರೂಪಿಸಿದರು. ವಾಯ್ಸ ಆಫ್ ಆರಾಧನಾ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net