

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯ ಪೂರ್ವಭಾಗದ ಪಡುಪಣಂಬೂರು ಪೇಟೆ ಬಸ್ಸು ನಿಲ್ದಾಣ ಸಂಪೂರ್ಣ ಗಿಡಗಂಟಿಗಳಿಂದ ಆವೃತಗೊಂಡು ಉಪಯೋಗ ಹೀನ ಹಾಗೂ ಅಪಾಯಕಾರಿಯಾಗಿರುವ ಬಗ್ಗೆ ವಿಜಯವಾಣಿ ಪ್ರಕಟಿಸಿತ್ತು.
ಈ ಬಗ್ಗೆ ಪಡುಪಣಂಬೂರು ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಪರ್ಕಿಸಿ ಅವರ ಸುಪರ್ದಿಯಲ್ಲಿರುವ ಈ ಬಸ್ ನಿಲ್ದಾಣದ ಬಗ್ಗೆ ಗಮನಹರಿಸಲು ಮಾಡಿದ ವಿನಂತಿ ವಿಫಲಗೊಂಡ ಕಾರಣ ಪಂಚಾಯಿತಿ ವತಿಯಿಂದ ಹುಲ್ಲು ಗಿಡಗಂಟಿಗಳನ್ನು ತೆಗೆದು ಪ್ರಯಾಣಿಕರಿಗೆ ಯೋಗ್ಯವಾದ ರೀತಿಯಲ್ಲಿ ಸರಿಪಡಿಸಲಾಗಿದೆ.
ವಿಜಯವಾಣಿ ವರದಿ ಗಮನಿಸಿ ಪಂಚಾಯಿತಿ ವತಿಯಿಂದ ಹುಲ್ಲು ಗಿಡಗಂಟಿಗಳನ್ನು ತೆಗೆದು ಸರಿಪಡಿಸಲಾಗಿದೆ ಎಂದು ಪಡುಪಣಂಬೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್ ತಿಳಿಸಿದರು.