

ಬೆಂಗಳೂರು: ರಾಜ್ಯದಲ್ಲಿ ಗುರುವಾರ 478 ಡೆಂಘೆ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಕೇವಲ ಎರಡು ದಿನಗಳಲ್ಲಿ ರಾಜ್ಯದಲ್ಲಿ 1,002 ಮಂದಿ ಡೆಂಘೆ ಪೀಡಿತರಾಗಿದ್ದಾರೆ ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 11,451ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 4,050 ಶಂಕಿತರನ್ನು ಡೆಂಘೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನಲ್ಲಿ 265, ದಾವಣಗೆರೆ 26, ಬೆಳಗಾವಿ ಮತ್ತು ಹಾಸನ ತಲಾ 25, ಚಿತ್ರದುರ್ಗ 22, ಧಾರವಾಡ 18, ಶಿವಮೊಗ್ಗ 17, ಮೈಸೂರು 16 ಸೇರಿ 478 ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿತರಲ್ಲಿ 620 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2,610 ಮಂದಿ ಮನೆಯಲ್ಲಿ ನಿಗಾದಲ್ಲಿ ಇದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿಯಲ್ಲಿ ತಿಳಿಸಿದೆ.