10 ಎಕರೆ ವಿಸ್ತೀರ್ಣದಲ್ಲಿ ನಡುಗಡ್ಡೆ ನಿರ್ಮಾಣ

04 hkr 01
Published on

ಹಿರೇಕೆರೂರ: ಪಟ್ಟಣದ ಅಯ್ಯಪ್ಪಸ್ವಾಮಿ ನಗರದ ತಿಪ್ಪಶೆಟ್ಟಿ ಕೆರೆ ಅಭಿವೃದ್ಧಿ ಹಾಗೂ ಉದ್ಯಾನ ನಿರ್ಮಾಣ ಕಾಮಗಾರಿಗೆ ಭಾನುವಾರ ಕೃಷಿ ಸಚಿವ ಬಿ.ಸಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

‘2 ಕೋಟಿ ರೂ. ವೆಚ್ಚದ ಈ ಕಾಮಗಾರಿಯಿಂದ ಉತ್ತಮ ಪರಿಸರದ ಜತೆಗೆ ನಗರ ಕಂಗೊಳಿಸಲಿದೆ. ದುರ್ಗಾದೇವಿ ಕೆರೆಯ ಮಧ್ಯ ಪಾರ್ಕ್, ನೂರು ಅಡಿಯ ಸರ್ವಜ್ಞ ಮೂರ್ತಿ ಸ್ಥಾಪನೆ ಹಾಗೂ ಬೋಟಿಂಗ್ ವ್ಯವಸ್ಥೆ ಕಲ್ಪಿಸಲು 10 ಎಕರೆ ವಿಸ್ತೀರ್ಣದಲ್ಲಿ ನಡುಗಡ್ಡೆ ನಿರ್ವಣವಾಗಿದೆ ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಪ.ಪಂ. ಸದಸ್ಯರಾದ ಮಹೇಂದ್ರ ಬಡಳ್ಳಿ, ಗುರುಶಾಂತ ಯತ್ತಿನಹಳ್ಳಿ, ಅಶೋಕ ಜಾಡಬಂದಿ, ಸುಧಾ ಚಿಂದಿ, ಅಲ್ತಾಫಖಾನ್ ಪಠಾಣ, ಹನುಮಂತ ಕುರಬರ, ಚಂದ್ರಕಲಾ ಕೋರಿಗೌಡ್ರ, ಜೆ.ಬಿ. ತಂಬಾಕದ, ಎಸ್.ವಿ. ಚಿಕ್ಕನರಗುಂದಮಠ, ಶಂಭಣ್ಣ ತಂಬಾಕದ, ಜಯದೇವ ಶಾಸ್ತ್ರೀ, ಪ.ಪಂ. ಮುಖ್ಯಾಧಿಕಾರಿ ರಾಜಾರಾಮ್ ಪವಾರ, ಅಧಿಕಾರಿಗಳಾದ ಡಿ. ನಾಗರಾಜ, ಶಿವಯೋಗಿ ಗೌಡ್ರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net