

ರಾಣೆಬೆನ್ನೂರ: ಮನೆಯ ಮುಂದೆ ಬಯಲು ಜಾಗದಲ್ಲಿ ಕಟ್ಟಿದ್ದ 1.20 ಲಕ್ಷ ರೂ. ಮೌಲ್ಯದ 10 ಟಗರುಗಳನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಕಾಕೋಳ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಮಲ್ಲಪ್ಪ ದಿಳ್ಳೆಪ್ಪ ಗಡಳ್ಳಿ (46) ಅವರ ಟಗರುಗಳು ಕಳ್ಳತನವಾಗಿದೆ. ಇವರು ತಮ್ಮ ಮನೆ ಮುಂದೆ 10 ಟಗರುಗಳನ್ನು ಕಟ್ಟಿಕೊಂಡು ಸಾಕಾಣಿಕೆ ಮಾಡುತ್ತಿದ್ದರು. ಆದರೆ, ರಾತ್ರಿ ಸಮಯದಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.