

ಕಾರವಾರ: ಗೋಕರ್ಣದಲ್ಲಿ ಮಾದಕ ವಸ್ತು ಚರಸ್ ಸಾಗಣೆ ಮಾಡುತ್ತಿರುವಾಗ ಸಿಕ್ಕಿ ಬಿದ್ದ ಮೂವರಿಗೆ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ (Imprisonment )ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಆದೇಶಿಸಿದ್ದಾರೆ. ತುಳಸು ಹಮ್ಮು ಗೌಡ, ಶ್ರೀಧರ ಉಮೇಶ ಗೌಡ ಹಾಗೂ ಸಂತ ಪೂರ್ಣ ಬಹಾದ್ದೂರ್ ತಮಂಗ್ ಶಿಕ್ಷೆಗೊಳಗಾದವರು. 2023 ರ ಮಾರ್ಚ್ 16 ರಂದು ಗೋಕರ್ಣ ಪೊಲೀಸರು ದಾಳಿ ನಡೆಸಿದ ವೇಳೆ ಬೇಲೆಕಾನ ಸಮೀಪ ಮೂವರ ಬಳಿ ಒಟ್ಟು ಸುಮಾರು 10 ಲಕ್ಷ ರೂ. ಮೌಲ್ಯದ 1 ಕೆಜಿ 648 ಗ್ರಾಂ ಚರಸ್ ಪತ್ತೆಯಾಗಿತ್ತು. ಗೋಕರ್ಣ ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೆ ಶಿಕ್ಷೆ ವಿಽಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳು ಜೈಲು ಶಿಕ್ಷೆ ವಿಧಿಸಿ, ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.
ಮಹಿಳೆ ಮತ್ತು ಆಕೆಯ ಗಂಡನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ವ್ಯಕ್ತಿಗೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಽಸಿ ಶಿರಸಿಯ 1ನೇ ಅಽಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮುಂಡಗೋಡು ಹಳೂರು ಓಣಿಯ ಶ್ಯಾಮಪ್ರಸಾದ ಕುಟ್ಟಪ್ಪನ ಶಿಕ್ಷೆಗೊಳಗಾದ ಅಪರಾಽ. 2022 ರ ಆಗಸ್ಟ್ನಲ್ಲಿ ಆತ ರಾಧಾಮಣಿ ದಿವಾಕರ್ ಹಾಗೂ ದಿವಾಕರ ರಾಘವನ್ನು ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ. ಮುಂಡಗೋಡ ಪಿಎಸ್‌ಐ ಬಸವರಾಜ ಮಬನೂರ ಆತನನ್ನು ಬಂಽಸಿ, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಠಾಣೆಯ ಸಿಬ್ಬಂದಿ ಗಣಪತಿ ಹೊನ್ನಳ್ಳಿ, ಕರಿಯಪ್ಪ ಇಂಗಳೂಸುರ ವಿಚಾಸಹಕರಿಸಿದ್ದರು. ವಿಚಾರಣೆ ನಡೆಸಿದ ಶಿರಸಿಯ 1 ನೇ ಅಽಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಿರಣ ಕಿಣಿ ಅವರು ತೀರ್ಪು ಪ್ರಕಟಿಸಿದ್ದು, 5 ಸಾವಿರ ರೂ.ಗಳನ್ನು ಗಾಯಾಳುಗಳಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪಿಪಿ ರಾಜೇಶ ಮಳಗೀಕರ್ ವಾದ ಮಂಡಿಸಿದ್ದರು.