ಪ್ರವಾಸಿಗರ ಕಾರಿನಲ್ಲಿದ್ದ 1 ಲಕ್ಷ ರೂ. ವಶ

Published on

ನಂಜನಗೂಡು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕೊಂಡೊಯ್ಯುತ್ತಿದ್ದ 1 ಲಕ್ಷ ರೂ. ನಗದನ್ನು ಭಾನುವಾರ ತಾಲೂಕಿನ ತಾಂಡವಪುರ ಚೆಕ್‌ಪೋಸ್ಟ್ ಬಳಿ ತಪಾಸಣಾ ಸಿಬ್ಬಂದಿ ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.


ಮಹಾರಾಷ್ಟ್ರ ಮೂಲದ ಪ್ರಮೋದ್ ಅವರು ಕುಟುಂಬ ಸಮೇತ ಬಂಡೀಪುರಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ತಾಂಡವಪುರ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸಿದಾಗ ಅವರ ಕಾರಿನಲ್ಲಿದ್ದ 1 ಲಕ್ಷ ರೂ. ನಗದನ್ನು ತಪಾಸಣಾ ಸಿಬ್ಬಂದಿ ಮುಟ್ಟಗೋಲು ಹಾಕಿಕೊಂಡಿದ್ದಾರೆ. ತಪಾಸಣೆ ತಂಡದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿ ಚಿನ್ನಸ್ವಾಮಿ, ರಂಗಸ್ವಾಮಿ ಹಾಗೂ ನಂಜನಗೂಡು ಪೊಲೀಸ್ ಠಾಣೆ ಪಿಎಸ್‌ಐ ಪ್ರಕಾಶ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net