ಕೇಶವ ಶಿಶು ಮಂದಿರಕ್ಕೆ 1 ಲಕ್ಷ ರೂ. ನೆರವು

Bel_Shishu Mandir
Published on

ಬೆಳ್ತಂಗಡಿ: ಇಳಂತಿಲ ವಾಣಿನಗರದ ಶ್ರೀ ಕೇಶವ ಶಿಶು ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ಸಮಿತಿಯ ಪದಾಧಿಕಾರಿಗಳಿಗೆ ವಿತರಿಸಿದರು.

ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಅಣ್ಣಾಜೆ, ಕಾರ್ಯದರ್ಶಿ ರವಿ ಇಳಂತಿಲ, ಸಮಿತಿಯ ಮಾಜಿ ಅಧ್ಯಕ್ಷ ಶಂಕರ ಭಟ್, ನಿಡ್ಡಾಜೆ ಇಳಂತಿಲ ಒಕ್ಕೂಟ ಅಧ್ಯಕ್ಷ ಮೋಹನ ಶೆಟ್ಟಿ, ಕಣಿಯೂರು ವಲಯ ಮೇಲ್ವಿಚಾರಕ ಶಿವಾನಂದ ಕೆ, ಸೇವಾ ಪ್ರತಿನಿಧಿ ವಸಂತಿ, ಸಮಿತಿ ಸದಸ್ಯರು, ಶಿಶು ಮಂದಿರದ ಪುಟಾಣಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net