ತೆರಕಣಾಂಬಿ ಸಂಘಕ್ಕೆ 1.81 ಲಕ್ಷ ರೂ. ಲಾಭ

23-GPT-1
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಭಾನುವಾರ ನಡೆಯಿತು.


ಸಂಘದ ಅಧ್ಯಕ್ಷ ಟಿ.ಆರ್.ರಮೇಶ್‌ನಾಯ್ಕ ಮಾತನಾಡಿ, ಈ ಸಾಲಿನಲ್ಲಿ ಸಂಘವು 1.81 ಲಕ್ಷ ರೂ. ಲಾಭಗಳಿಸಿದ್ದು ಗುಣಮಟ್ಟದ ಹಾಲು ಪೂರೈಸಿದ ಉತ್ಪಾದಕರಿಗೆ 85 ಸಾವಿರ ಬೋನಸ್ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕರಾದ ಸರ್ಪಭೂಷಣಸ್ವಾಮಿ, ಬಸಪ್ಪ, ನಾಗರಾಜು, ಬಸವನಾಯ್ಕ, ಮಹೇಶ್, ರಮೇಶ, ಟಿ.ಪಿ.ಉಮೇಶ್, ಮಾರ್ಗ ವಿಸ್ತರಣಾಧಿಕಾರಿ ಮಂಜೇಶ್, ಮುಖ್ಯಕಾರ್ಯನಿರ್ವಾಹಕ ಎಂ.ಮಾದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net