ಅಂಡಿಂಜೆ ಶಾಲೆಗೆ ಧರ್ಮಸ್ಥಳದಿಂದ 1.5 ಲಕ್ಷ ರೂ. ನೆರವು

New Project (3)
Published on

ಬೆಳ್ತಂಗಡಿ: ಅಂಡಿಂಜೆ ಶಾಲೆಯ ಭೋಜನಾಲಯ ಹಾಗೂ ಸಭಾಭವನ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು 1.5 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದು, ಮಂಜೂರಾತಿ ಪತ್ರವನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.

ಯೋಜನೆಯ ವೇಣೂರು ವಲಯ ಮೇಲ್ವಿಚಾರಕಿ ಶಾಲಿನಿ ಮತ್ತು ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಮೋಹನ್ ಅಂಡಿಂಜೆ ಶಾಲಾ ಸಮಿತಿಗೆ ಆದೇಶ ಪತ್ರ ಹಸ್ತಾಂತರಿಸಿದರು. ಮುಖ್ಯಶಿಕ್ಷಕ ಶಿವಶಂಕರ್ ಭಟ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಬಂಗೇರ, ವಿನಾಯಕ ಭಜನಾ ಮಂಡಳಿ ಅಧ್ಯಕ್ಷ ಆನಂದ ಕುಲಾಲ್, ಪ್ರಗತಿ ಬಂಧು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷರಾದ ಯಶೋಧರ ಮತ್ತು ಸುಲೋಚನ, ಸೇವಾಪ್ರತಿನಿಧಿ ಭಾಗ್ಯ, ಒಕ್ಕೂಟದ ಕಾರ್ಯದರ್ಶಿ ಸುರೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net