

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ವಿದ್ಯಾರ್ಥಿಗಳಿಗೆ ಗುರಿ ಅತಿ ಮುಖ್ಯ. ಯಾವುದಕ್ಕಾಗಿ ಓದುತ್ತಿದ್ದೇವೆ ಎನ್ನುವ ಜ್ಞಾನ ನಿಮ್ಮಲ್ಲಿರಬೇಕು. ನಿಮ್ಮ ಸಮಯವನ್ನು ಓದಿಗೆ ಮೀಸಲಿಡಬೇಕು. ಇಷ್ಟಪಟ್ಟು ಕೆಲಸ ವಾಡಿದಾಗ ಅದು ಕಷ್ಟವೆನಿಸುವುದಿಲ್ಲ ಎಂದು ಇನ್ಸ್ಟಿಟ್ಯೂಟ್ ಆ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾದ (ಐಸಿಎಸ್ಐ) ಕೇಂದ್ರ ಸಮಿತಿ ಸದಸ್ಯ ಸಿ.ಎಸ್. ದ್ವಾರಕಾನಂದ್ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಹಯೋಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಣ ತಜ್ಞರ ಸಶಕ್ತೀಕರಣ ಶಿಕ್ಷಕರ ಸಮ್ಮೇಳನದಲ್ಲಿ ಅವರು ವಾತನಾಡಿದರು.
ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪ್ರಜ್ವಲ್ ಆಚಾರ್ ವಾತನಾಡಿ, ಶಿಕ್ಷಕರು ತುಂಬಾ ಸವಾಲುಗಳನ್ನು ಎದುರಿಸಬೇಕಾಗಿದೆ. ಶಿಕ್ಷಣ ನೀಡುವ ಜೊತೆಗೆ ತಂತ್ರಜ್ಞಾನಕ್ಕೆ ಸ್ಪಂದಿಸಬೇಕು. ನಾಳೆಯ ಸವಾಜಕ್ಕೆ ನಾಯಕರನ್ನು ನೀಡುವ ದೊಡ್ಡ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲೆ ಇದೆ ಎಂದರು.
ಮಂಗಳೂರು ರಥಬೀದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮನೋಜ್ ಲೂಯಿಸ್ ಹಾಗೂ ಕಂಪನಿ ಸೆಕ್ರಟರೀಸ್ ಆಗಿ ವೃತ್ತಿ ಜೀವನ ಮತ್ತು ಉದ್ಯೋಗ ಅವಕಾಶಗಳು ಕುರಿತು ಮಣಿಪಾಲ್ ಟೆಕ್ನಾಲಜಿಯ ಸೆಕ್ರೆಟರಿ ಚಂದನಾ ಟಿಕೋಠಿ ಉಪನ್ಯಾಸ ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಂಪನಿ ಸೆಕ್ರೆಟರಿಗಳಾದ ರಾಕೇಶ್ ನಾಯಕ್, ಸಂತೋಷ್ ಪ್ರಭು, ಸಿದ್ದೇಶ್ ಭಕ್ತ, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ ಉಪಸ್ಥಿತರಿದ್ದರು.
ಅಪರ್ಣಾ ಕೆ.ಸ್ವಾಗತಿಸಿ, ಸುಪ್ರೀತಾ ನಾಯಕ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸಮನ್ ಸೈಯದ್ ಕಾರ್ಯಕ್ರಮ ನಿರೂಪಿಸಿದರು.