1.03 ಕೋಟಿ ರೂ. ನರೇಗಾ ಕಾಮಗಾರಿ

Oplus_131072
Oplus_131072
Published on

ಯಳಂದೂರು: ಕಳೆದ ಸಾಲಿನಲ್ಲಿ ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ 1.03 ಕೋಟಿ ರೂ.ವೆಚ್ಚದ ಕಾಮಗಾರಿಗಳು ನಡೆದಿವೆ ಎಂದು ನರೇಗಾ ತಾಲೂಕು ಸಂಯೋಜಕ ನಾರಾಯಣಸ್ವಾಮಿ ಮಾಹಿತಿ ನೀಡಿದರು.


ಬುಧವಾರ ತಾಲೂಕಿನ ಯರಿಯೂರು ಗ್ರಾಮದ ಮಸೀದಿ ಮುಂಭಾಗ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ಮಾತನಾಡಿದರು.


ಗ್ರಾಮದಲ್ಲಿ ವಸತಿ ನಿರ್ಮಾಣ, ದನದ ಕೊಟ್ಟಿಗೆ, ಕುರಿ ಕೊಟ್ಟಿಗೆ, ಸೋಕ್ ಪಿಟ್, ಸಿ.ಸಿ.ರಸ್ತೆ, ಕಾಲುವೆ ಹೂಳು ತೆಗೆಯುವುದು, ಕಾಲುವೆ ಹೂಳು ತೆಗೆಯುವುದು, ಆಟದ ಮೈದಾನ, ಕೆರೆ-ಕಟ್ಟೆ ಅಭಿವೃದ್ಧಿ, ಎರೆಹುಳು ಘಟಕ, ಸ್ಮಶಾನ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ, ಈರುಳ್ಳಿ ಶೆಡ್ ನಿರ್ಮಾಣ, ತೆಂಗಿನ ಗಿಡ ನೆಡುವುದು ಸೇರಿದಂತೆ ಒಟ್ಟು 172 ಕಾಮಗಾರಿಗಳು ನಡೆದಿವೆ ಎಂದು ವಿವರಿಸಿದರು.


ಒಟ್ಟು 25276 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಇದರಿಗೆ ಕೂಲಿ ಮೊತ್ತವಾಗಿ 78.10 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿದ್ದು, 25.03 ಲಕ್ಷ ರೂ.ಗಳನ್ನು ಸಾಮಗ್ರಿ ಮೊತ್ತವಾಗಿ ಒಟ್ಟು 1.03 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಇದರಲ್ಲಿ 10.10 ಲಕ್ಷ ರೂ.ವೆಚ್ಚದ 2 ಕಾಮಗಾರಿಗಳು ಹೆಚ್ಚುವರಿ ಅಳತೆಯನ್ನು ಹೊಂದಿವೆ, ಎರೆಹುಳು ತೊಟ್ಟಿ ನಿರ್ಮಾಣ ಎಂದು ತೋರಿಸಿದ್ದರೂ 2 ಕಡೆ ಇದರ ನಿರ್ಮಾಣವಾಗಿಲ್ಲ, 2.27 ಲಕ್ಷ ರೂ. ರಾಯಲ್ಟಿ ಹಣವನ್ನು ಕಟ್ಟಿಲ್ಲ, ಪಂಚಾಯಿತಿಯಲ್ಲಿ ಒಟ್ಟು 1.96 ಲಕ್ಷ ರೂ. ಆಕ್ಷೇಪಣೆ ಮತ್ತು ವಸೂಲಾತಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.


ಪಿಡಿಒ ರಮೇಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿಗಳ ನಾಮಫಲಕವನ್ನು ಕೆಲವು ಕಡೆ ಒಡೆದು ಹಾಕಲಾಗಿದೆ. ಹೀಗೆ ಮಾಡುವುದರಿಂದ ಇದರ ದುರುಪಯೋಗವಾಗುತ್ತದೆ. ಗ್ರಾಮ ವ್ಯಾಪ್ತಿಯಲ್ಲಿ ಹಲವು ಕಡೆ ಅನೇಕ ಸಮಸ್ಯೆಗಳಿವೆ ಎಂದು ದೂರು ಬಂದಿದ್ದು, ಅದನ್ನು ಹಂತಹಂತವಾಗಿ ಬಗೆಹರಿಸುವ ಭರವಸೆ ನೀಡಿದರು.


ನೋಡಲ್ ಅಧಿಕಾರಿ ಕೆ.ಕಾಂತರಾಜು, ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ ನಂಜುಂಡಸ್ವಾಮಿ, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಚಿನ್ನಸ್ವಾಮಿ, ಕಪ್ಪಣ್ಣ, ರಾಜೇಶ್, ನಾರಾಯಣಸ್ವಾಮಿ, ರಮೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net