

ಹೆಬ್ರಿ: ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಅನೇಕ ಮಾಹಿತಿ, ಸಮರ್ಪಕ ಜ್ಞಾನ ನೀಡಿ ಸ್ಪರ್ಧಾತ್ಮಕ, ಬೋರ್ಡ್ ಪರೀಕ್ಷೆಗಳಿಗೆ ಉಪಯೋಗಕಾರಿಯಾಗುತ್ತದೆ. ದಾನಿಗಳು ಪ್ರಾಯೋಜಕತ್ವ ವಹಿಸಿ ನಮ್ಮ ಶಾಲೆ ಆಯ್ಕೆ ಮಾಡಿರುವುದಕ್ಕೆ ವಂದನೆಗಳು ಎಂದು ಮುನಿಯಾಲು ಕೆಪಿಎಸ್ಸಿ ಪ್ರಾಂಶುಪಾಲೆ ಬೇಬಿ ಶೆಟ್ಟಿ ಹೇಳಿದರು.
ಮುನಿಯಾಲು ಕೆಪಿಎಸ್ಸಿ ಶಾಲೆಯಲ್ಲಿ ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರು ನೇತೃತ್ವದಲ್ಲಿ ಪ್ರಾಯೋಜಕತ್ವ ವಹಿಸಿದ ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಸೋಮವಾರ ನಡೆದ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತಿನಿಕೇತನ ಸಂಸ್ಥಾಪಕ ರಾಜೇಶ್ ಮಾತನಾಡಿ, ಇದು ವಿದ್ಯಾರ್ಥಿಗಳ ಪರೀಕ್ಷೆ ದೃಷ್ಟಿಯಲ್ಲಿ ಸಹಾಯ ಮಾಡುತ್ತದೆ. ಅನೇಕ ಸಾಧಕರ ಮಾಹಿತಿ ಇರುವುದರಿಂದ ಇವುಗಳು ಸ್ಫೂರ್ತಿದಾಯಕವಾಗಬಹುದು. ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಬೇಕೆಂದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮಂಜುನಾಥ್, ಉಪಪ್ರಾಂಶುಪಾಲ ರವೀಂದ್ರ ರಾವ್, ಶಿಕ್ಷಕರು ಇದ್ದರು.