ತುಳುವರಿಗೆ ಭಾಷೆ, ಸಂಸ್ಕೃತಿ ಅಭಿಮಾನ

tulu

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಟ್ಟುಪಾಡು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ತುಳು ಸಂಸ್ಕೃತಿ ಬಹು ಸಂಸ್ಕೃತಿ. ತುಳುವರಿಗೆ ಭಾಷೆ ಮತ್ತು ಸಂಸ್ಕೃತಿ ಅಭಿಮಾನವಿದೆ. ಹಿಂದೆ ಕೀಳರಿಮೆಯಿತ್ತು. ಇಂದು ತುಳುವಿನ ಬಗ್ಗೆ ಅಭಿಮಾನವಿದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜು ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಹೇಳಿದರು.

ಬ್ರಹಶ್ರೀ ನಾರಾಯಣಗುರುಗಳ 96ನೇ ಪುಣ್ಯ ತಿಥಿ ಪ್ರಯುಕ್ತ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಯುವವಾಹಿನಿ ಪಡುಬಿದ್ರಿ ಘಟಕ ಸಂಯುಕ್ತವಾಗಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ತುಳುವೆರೆ ಬದ್‌ಕ್ (ಕೂಡುಕಟ್ಟ್ – ಕಟ್ಟ್‌ಪಾಡ್) ಕಾರ್ಯಕ್ರಮದ ಸಮನ್ವಯಕಾರರಾಗಿ ಮಾತನಾಡಿದರು.

ಜಾನಪದ ಚಿಂತಕ ಜಯ ಎಸ್. ಶೆಟ್ಟಿ ಪದ್ರ ಮಾತನಾಡಿ, ದ್ರಾವಿಡ ಮೂಲದ ತುಳುವರ ಬದುಕು ಕೃಷಿ ಆಧಾರಿತವಾಗಿತ್ತು. ಕೃಷಿ ಹಿಂದುಳಿಯಲು ಕೌಟುಂಬಿಕತೆಯೇ ಕಾರಣ. ಬದುಕಿನಲ್ಲಿ ದೈವತ್ವ ಕಂಡವರು ತುಳುವರು ಎಂದರು.

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಹರೀಶ್ ಕೆ. ಪೂಜಾರಿ ಉದ್ಘಾಟಿಸಿದರು. ಸ್ನಾತಕೋತ್ತರ ವೈದ್ಯಕೀಯ ಪದವಿಯಲ್ಲಿ 6ನೇ ರ‌್ಯಾಂಕ್ ಪಡೆದ ಡಾ.ಐಶ್ವರ್ಯ ಸಿ.ಅಂಚನ್ ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪಡುಬಿದ್ರಿ ಯುವವಾಹಿನಿ ಘಟಕದ ಅಧ್ಯಕ್ಷೆ ಶಶಿಕಲಾ ಯಶೋಧರ್, ನಾರಾಯಣಗುರು ಮಂದಿರ ಪ್ರಧಾನ ಅರ್ಚಕ ಚಂದ್ರಶೇಖರ ಶಾಂತಿ, ಪಡುಬಿದ್ರಿ ಘಟಕ ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕ ಭಾಸ್ಕರ್ ಎನ್ ಅಂಚನ್, ಬಿಲ್ಲವ ಸಂಘ ಕಾರ್ಯದರ್ಶಿ ಲಕ್ಷ್ಮಣ ಡಿ.ಪೂಜಾರಿ, ಯುವವಾಹಿನಿ ಘಟಕ ಕಾರ್ಯದರ್ಶಿ ಸುಜಾತ ಪ್ರಸಾದ್ ಉಪಸ್ಥಿತರಿದ್ದರು. ಸುಜಿತ್ ಪೂಜಾರಿ ಪ್ರಸ್ತಾವನೆಗೈದರು. ಭಾಸ್ಕರ್ ಎನ್.ಅಂಚನ್ ವಂದಿಸಿದರು. ರವಿರಾಜ್ ಕೋಟ್ಯಾನ್ ಮತ್ತು ಡಾ.ಐಶ್ವರ್ಯ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

16 ವರ್ಗದವರು ಜತೆಗೂಡಿದಾಗ ದೈವಾರಾಧನೆ ಪರಿಪೂರ್ಣ. ತುಳುನಾಡಿನ ದೈವಾರಾಧನೆ ಜಾತಿ ಮತ ಧರ್ಮ ಮೀರಿದೆ. ಆರಾಧನೆ ಬದುಕಿನ ನಡುವೆ ಕೂಡುಕಟ್ಟು ಬಹುಮುಖ್ಯ. ಹುಟ್ಟು ಸಾವಿನವರೆಗೂ ಇದು ಅನಿವಾರ್ಯ.
-ಸಂತೋಷ್ ನಂಬಿಯಾರ್ ಚಿಂತಕ

Share This Article

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…

ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತಿದೆಯೇ; ಅದಕ್ಕೆ ಕಾರಣ & ಲಕ್ಷಣವೇನು ಎಂಬ ಮಾಹಿತಿ ಇಲ್ಲಿದೆ | Health Tips

ನೀವು ಆಹಾರವನ್ನು ಸೇವಿಸಿದಾಗ ನಿಮ್ಮ ಜೀರ್ಣಾಂಗವು ಅದನ್ನು ತುಂಡುಗಳಾಗಿ ಮಾಡುತ್ತದೆ ಮತ್ತು ಅದನ್ನು ಶಕ್ತಿಯಾಗಿ ಬಳಸುತ್ತದೆ.…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ