

ಕೋಟ: ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಜಂಟಿಯಾಗಿ ಕೋಡಿ ಹೊಸಬೆಂಗ್ರೆಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷ ಲೋಹಿತ್ ಖಾರ್ವಿ, ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ ಅಧ್ಯಕ್ಷ ಬೇಬಿ ಮೆಂಡನ್, ನಿರ್ದೇಶಕರಾದ ಸುದಿನ, ಕಾರ್ತಿಕ್, ಸ್ಕೋಡ್‌ವೆಸ್ ಸಂಸ್ಥೆ ಗಂಗಾಧರ್ ನಾಯಕ್, ಕೋಡಿ ಗ್ರಾಪಂ ಮಾಜಿ ಸದಸ್ಯರಾದ ಅಣ್ಣಪ್ಪ ಕುಂದರ್, ಸುರೇಶ್ ಕುಂದರ್, ಅಂಗನವಾಡಿ ಮೇಲ್ವಿಚಾರಕಿ ಸವಿತಾ, ಆಶಾ ಕಾರ್ಯಕರ್ತೆ ಜ್ಯೋತಿ, ಸಿಬ್ಬಂದಿ ಭೂಮಿಕಾ ಶೆಟ್ಟಿ ಮತ್ತು ಸುಶ್ಮಿತಾ ಮೆಂಡನ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಯಮುನಾ ಕೋಡಿ ನಿರೂಪಿಸಿದರು.