ಪೌಷ್ಟಿಕ ಆಹಾರದಿಂದ ಪರಿಪೂರ್ಣ ಬೆಳವಣಿಗೆಗೆ : ಹರ್ಷರಾಜ ಶೆಟ್ಟಿ ಜಿ.ಎಂ. ಅನಿಸಿಕೆ

07
Published on

ಮೂಲ್ಕಿ: ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಸೇವನೆ ಬಹಳ ಅಗತ್ಯವಾಗಿದ್ದು ಶಾಲೆಯಲ್ಲಿ ಶಿಕ್ಷಣದ ಜತೆಗೆ ಪರಿಪೂರ್ಣ ಆಹಾರ ಮತ್ತು ಸ್ವಚ್ಛತೆ ಪಾಲಿಸುವುದು ಬಹಳ ಅಗತ್ಯ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ. ಹೇಳಿದರು.

ಮೂಲ್ಕಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕೆ.ಎಸ್.ರಾವ್ ನಗರ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಲ್‌ಸಿಐಎಫ್-ಡಿಸಿಜಿ ಸೇವಾ ಅನುದಾನದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ, ಪೌಷ್ಟಿಕ ಆಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಗ್ಲೋಬಲ್ ಸರ್ವಿಸ್ ಮುಖ್ಯಸ್ಥ ವೆಂಕಟೇಶ್ ಹೆಬ್ಬಾರ್, ಪದಾಧಿಕಾರಿಗಳಾದ ಶೀತಲ್ ಸುಶೀಲ್, ಸುಶೀಲ್ ಬಂಗೇರ, ಉದಯ ಅಮೀನ್ ಮಟ್ಟು, ಸದಾಶಿವ ಹೊಸದುರ್ಗ, ಮೋಹನದಾಸ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಲತಾ ಶೇಖರ್, ಶೋಭಾ ಸುಜೀತ್, ಅರುಣಾ ಎಂ, ಪ್ರತಿಭಾ ಹೆಬ್ಬಾರ್, ಶಾಲಾ ಮುಖ್ಯಶಿಕ್ಷಕ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net