

ಬಂಟ್ವಾಳ: ದ.ಕ ಜಿಪಂ ಕೃಷಿ ಇಲಾಖೆ ವತಿಯಿಂದ 2025-26ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಉಪ ಅಭಿಯಾನ ಆತ್ಮ ಯೋಜನೆಯಡಿ ಕಿಸಾನ್ ಗೋಷ್ಠಿ, ಬೆಳೆ ಸಮೀಕ್ಷೆ ಆ್ಯಪ್ ಕುರಿತು ತರಬೇತಿ, ಕೃಷಿ ಸಲಕರಣೆ, ಸವಲತ್ತುಗಳ ವಿತರಣೆ, ಬೆಳೆ ಸಮೀಕ್ಷೆಯ ಕರಪತ್ರ ಬಿಡುಗಡೆ, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಹಾಗೂ ತಾಲೂಕುಮಟ್ಟದ ರೈತರಿಗೆ ಸನ್ಮಾನ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನಲ್ಲಿರುವ ತಾಲೂಕು ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ವಿಟ್ಲ ಸಿಪಿಸಿಆರ್‌ಐನ ವಿಜ್ಞಾನಿ ಡಾ.ಮಧು ಮಾಹಿತಿ ನೀಡಿದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಕೃಷಿ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಕುಮುದಾ, ಬಂಟ್ವಾಳ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ಕೃಷಿ ಅಧಿಕಾರಿ ನಂದನ್ ಶೆಣೈ ಮೊದಲಾದವರಿದ್ದರು.
ಬಂಟ್ವಾಳ ಕಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್. ಸ್ವಾಗತಿಸಿದರು. ತಾಂತ್ರಿಕ ವ್ಯವಸ್ಥಾಪಕಿ ದಿಶಾ ಸನ್ಮಾನಿತರ ಪಟ್ಟಿ ವಾಚಿಸಿದರು. ಪಿಡಿಒ ಸುನೀಲ್ ನಿರೂಪಿಸಿದರು.
ಸಾಧಕ ರೈತರಿಗೆ ಸನ್ಮಾನ
2022-23 ಹಾಗೂ 2023-24ರ ಸಾಲಿನ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ಮತ್ತು ಬೆಳೆ ಸ್ಪರ್ಧೆ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಹಾಗೂ ತಾಲೂಕುಮಟ್ಟದ ರೈತರನ್ನು ಸನ್ಮಾನಿಸಲಾಯಿತು. ರೈತ ಫಲಾನುಭವಿಗಳಿಗೆ ವಿವಿಧ ಸಲಕರಣೆ, ಸವಲತ್ತು ಹಾಗೂ ತಾಲೂಕಿನಲ್ಲಿರುವ 60 ಮಂದಿ ಕೃಷಿ ಸಖಿಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.