More

    ಐಪಿಎಲ್​ನಲ್ಲಿ ದಾಖಲೆ ಬರೆದ ಆರ್​ಸಿಬಿ vs ಸಿಎಸ್​ಕೆ ಉದ್ಘಾಟನಾ ಪಂದ್ಯ

    ಚೆನ್ನೈ: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ 17ನೇ ಆವೃತ್ತಿಯ ಐಪಿಎಲ್​ ಉದ್ಘಾಟನೆಗೊಂಡು ಆರು ದಿನಗಳು ಕಳೆದಿವೆ. ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವೆ ನಡೆದ ಉದ್ಘಾಟನಾ ಪಂದ್ಯವು ಈಗ ದಾಖಲೆಯೊಂದನ್ನು ಬರೆದಿದೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಮತ್ತೊಂದು ದಾಖಲೆಗೆ ಪಾತ್ರವಾಗಿದೆ.

    ಚೆಪಾಕ್​ನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಉದ್ಘಾಟನಾ ಪಂದ್ಯವು 16.8 ಕೋಟಿ ವೀಕ್ಷಕರನ್ನು ಸೆಳೆದಿದೆ ಎಂದು ಟೂರ್ನಿಯ ಆಧಿಕೃತ ಪ್ರಸಾರಕರು ಗುರುವಾರ ಮಾಹಿತಿ ನೀಡಿದ್ದಾರೆ.

    ಚೆನ್ನೈ ಹಾಗೂ ಬೆಂಗಳೂರು ನಡುವಿನ ಉದ್ಘಾಟನಾ ಪಂದ್ಯವು 1,276 ಕೋಟಿ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದ್ದು, ಇದು ಐಪಿಎಲ್‌ನ ಯಾವುದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ದಾಖಲಾದ ಅತೀ ಹೆಚ್ಚು ಸಮಯ ಮತ್ತು ಹಾಟ್​ಸ್ಟಾರ್​ನಲ್ಲಿ ಏಕಕಾಲದಲ್ಲಿ 6.1 ಕೋಟಿ ಜನರು ಏಕಕಾಲದಲ್ಲಿ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ಪ್ರಸಾರಕರು ತಿಳಿಸಿದ್ಧಾರೆ.

    ಇದನ್ನೂ ಓದಿ: ಎಲ್ಲರ ಮುಂದೆ ರೊಮ್ಯಾನ್ಸ್​ ಮಾಡೋದು ಅಷ್ಟು ಸುಲಭದ ಮಾತಲ್ಲ: ನಟಿ ಅನುಪಮಾ ಪರಮೇಶ್ವರನ್

    2023ರಲ್ಲಿ ನಡೆದ ಉದ್ಘಾಟನಾ ಪಂದ್ಯವು 870 ಕೋಟಿ ವೀಕ್ಷಕ ಗಂಟೆಗಳನ್ನು ದಾಖಲಿಸಿತು. ಕಳೆದ ಆವೃತ್ತಿಯ ಟಿ.ವಿ ವೀಕ್ಷಕರಿಗೆ ಹೋಲಿಸಿದರೆ ಇದು ಶೇ 16ರಷ್ಟು ಹೆಚ್ಚಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಟೂರ್ನಿಯ ಡಿಜಿಟಲ್ ಪ್ರಸಾರಕ ಜಿಯೋ ಸಿನಿಮಾವು ಮೊದಲ ದಿನ 11.3 ಕೋಟಿ ವೀಕ್ಷಕರನ್ನು ಸೆಳೆದಿದೆ. ಮೊದಲ ದಿನ 660 ಕೋಟಿ ವೀಕ್ಷಕ ನಿಮಿಷಗಳು ದಾಖಲಾಗಿವೆ ಎಂದು ಜಿಯೋ ಮಾಹಿತಿ ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸುದ್ದಿವಾಹಿನಿಯ ವಕ್ತಾರರು, ನೆಟ್‌ವರ್ಕ್‌ನ ಅಚಲ ಬದ್ಧತೆಯಿಂದ ಅಭಿಮಾನಿಗಳ ಪ್ರೀತಿ ಮತ್ತು ಸೇವೆಯಿಂದ ಇದು ಸಾಧ್ಯವಾಗಿದೆ. ಕ್ರೀಡೆಯನ್ನು ಉತ್ತೇಜಿಸಲು ನಮ್ಮ ಸಂಸ್ಥೆಯೂ ನಿರಂತರವಾಗಿ ಶ್ರಮಿಸುತ್ತಿದೆ. ನಮ್ಮನ್ನು ಪ್ರೋತ್ಸಾಹಿಸಿದ ಬಿಸಿಸಿಐ ಹಾಗೂ ಎಲ್ಲಾ ಕ್ರೀಡಾ ಅಭಿಮಾನಿಗಳಿಗೆ ನಾವು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts