More

  ಎಲ್ಲರ ಮುಂದೆ ರೊಮ್ಯಾನ್ಸ್​ ಮಾಡೋದು ಅಷ್ಟು ಸುಲಭದ ಮಾತಲ್ಲ: ನಟಿ ಅನುಪಮಾ ಪರಮೇಶ್ವರನ್

  ಹೈದರಾಬಾದ್: ಕರ್ನಾಟಕ ರತ್ನ, ಪವರ್​ಸ್ಟಾರ್​ ಡಾ. ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ್ದ ನಟಿ ಅನುಪಮಾ ಪರಮೇಶ್ವರನ್​ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿ ಇಂಡಸ್ಟ್ರಿಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

  ಬಹುಭಾಷಾ ನಟಿಯಾಗಿರುವ ಅನುಪಮಾ ಕೆಲವು ದಿನಗಳಿಂದ ಬಹಳ ಸುದ್ದಿಯಲ್ಲಿದ್ದಾರೆ. ಟಾಲಿವುಡ್​ನಲ್ಲಿ ಟಿಲ್ಲು ಸ್ಕ್ವೇರ್​ ಸಿನಿಮಾದ ಟ್ರೈಲರ್​ ಬಿಡುಗಡೆಯಾದಾಗಿನಿಂದ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಇದುವರೆಗೂ ಸಾಂಪ್ರದಾಯಿಕ ಪಾತ್ರಗಳಲ್ಲಿ ನಟಿಸುತ್ತಿದ್ದ ಅನುಪಮಾ, ದಿಢೀರನೇ ಅಲ್ಟ್ರಾ ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

  ನಾಯಕ ಸಿದ್ದು ಜೊನ್ನಲಗಡ್ಡ-ಅನುಪಮಾ ಅಭಿನಯದ ‘ಟಿಲ್ಲು ಸ್ಕ್ವೇರ್’ ಚಿತ್ರ ಮಾರ್ಚ್ 29 ರಂದು ಬಿಡುಗಡೆಯಾಗುತ್ತಿದೆ. ಹಾಗಾಗಿ ಚಿತ್ರತಂಡ ಈಗಾಗಲೇ ಪ್ರಮೋಷನ್ ಆರಂಭಿಸಿದೆ. ಇದರ ನಡುವೆ ನಾಯಕಿ ಅನುಪಮಾ ಪರಮೇಶ್ವರನ್​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಇವರ ಮಾತುಗಳನ್ನು ಕೇಳಿ ಸಿನಿಪ್ರಿಯರು ದಂಗಾಗಿದ್ದಾರೆ.

  ಇದನ್ನೂ ಓದಿ: ಟಿಕೆಟ್​ ದರದಲ್ಲೂ ದಾಖಲೆ ಸೃಷ್ಟಿಸಿದ ಆರ್​ಸಿಬಿ; ಬೆಲೆ ಕೇಳಿ ದಂಗಾದ ಫ್ಯಾನ್ಸ್​

  ಸಿನಿಮಾಗಾಗಿ ಕೆಲವು ನಟ-ನಟಿಯರು ಬೋಲ್ಡ್ ದೃಶ್ಯಗಳನ್ನು ಮಾಡಲು ಒಪ್ಪಿಕೊಳ್ಳುತ್ತಾರೆ. ಸಿನಿಮಾದ ದೃಶ್ಯ ಅದನ್ನು ಕೇಳುತ್ತಿದೆ ಎಂದಾಗ ಅದನ್ನು ಅರಿತು ನಟಿಸಲು ನಟ-ನಟಿಯರು ಒಪ್ಪುತ್ತಾರೆ. ಈ ರೀತಿ ದೃಶ್ಯಗಳನ್ನು ಶೂಟ್ ಮಾಡುವಾಗ ಇಡೀ ತಾಂತ್ರಿಕ ವರ್ಗ ಅಲ್ಲಿರುತ್ತದೆ. ಈ ರೀತಿಯ ದೃಶ್ಯಗಳನ್ನು ಮಾಡೋದು ಬಲು ಕಷ್ಟ ಎಂದು ನಟಿ ಅನುಮಪಮಾ ಪರಮೇಶ್ವರನ್​ ಹೇಳಿದ್ದಾರೆ.

  ರೊಮ್ಯಾಂಟಿಕ್ ದೃಶ್ಯ ಮಾಡೋದು ಸುಲಭದ ಮಾತಲ್ಲ. ಇಬ್ಬರು ಇಂಟಿಮೇಟ್ ಆಗೋದು ಖಾಸಗಿ ಕ್ಷಣ. ಆದರೆ ಶೂಟ್​ಗಾಗಿ 100 ಜನರ ಎದುರು ಅದನ್ನು ಮಾಡಬೇಕು. ಕಾರ್​ನಲ್ಲಿ ಕಿಸ್ ಮಾಡೋ ದೃಶ್ಯ ಸಖತ್ ಕಷ್ಟ ಆಗಿತ್ತು. ಕಾಲಿಗೆ ಎರಡು ಕಡೆಗಳಲ್ಲಿ ಗಾಯ ಆಗಿತ್ತು. ಆದರೂ ಆ್ಯಕ್ಟ್ ಮಾಡಲೇಬೇಕು. ರೊಮ್ಯಾನ್ಸ್ ಮಾಡೋದು ಸುಲಭ ಎಂದು ಪ್ರೇಕ್ಷಕರು ಭಾವಿಸುತ್ತಾರೆ. ಆದರೆ, ಅದು ಅಷ್ಟು ಸುಲಭ ಅಲ್ಲ ಎಂದು ನಟಿ ಅನುಪಮಾ ಪರಮೇಶ್ವರನ್​ ಹೇಳಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts