

ಮುಂಬೈ: ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್ ಸೇರಿ ದಕ್ಷಿಣ ಭಾರತದ ಹಲವು ಖ್ಯಾತ ನಟ ನಟಿಯರು ಒಟ್ಟಾಗಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಬರುವ ಡಿ. 4ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಿಡುಗಡೆ ಬಗ್ಗೆ ಚಿತ್ರತಂಡ ಚಕಾರ ಎತ್ತಿಲ್ಲ. ಇದೀಗ ಇದೇ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಮಾಲ್ಡೀವ್ಸ್ನಲ್ಲಿ ಪತಿ ಜತೆಗೆ ಸಮಂತಾ ಹಾಲಿಡೇ …
‘ಯೇ ಜವಾನಿ ಹೇ ದಿವಾನಿ’ ಖ್ಯಾತಿಯ ನಿರ್ದೇಶಕ ಅಯಾನ್ ಮುಖರ್ಜಿ ಬ್ರಹ್ಮಾಸ್ತ್ರ ಚಿತ್ರ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೋಡಕ್ಷನ್ ಕೆಲಸಗಳಲ್ಲಿ ಇಡೀ ತಂಡ ತೊಡಗಿಸಿಕೊಂಡಿದೆ. ಈ ನಡುವೆಯೇ ಇದೀಗ ಈ ಸಿನಿಮಾ ಡಿಸ್ನಿ ಹಾಟ್ಸ್ಟಾರ್ ಪ್ಲಸ್ ಓಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಸ್ವತಃ ಚಿತ್ರದ ನಿರ್ಮಾಪಕ ಕರಣ್ ಜೋಹರ್ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಹಾಟ್ಸ್ಟಾರ್ಗೆ ಸಿನಿಮಾ ನೀಡುವಂತೆ ನಿರ್ಮಾಪಕರ ಬಳಿ ಕೇಳಿದ್ದು, ನಿರ್ಮಾಪಕ ಕರಣ್ ಜೋಹರ್ ಈ ಆಫರ್ ಅನ್ನು ಕೈ ಬಿಟ್ಟಿದ್ದಾರಂತೆ. ಅಷ್ಟೇ ಅಲ್ಲ ಈ ಸಿನಿಮಾ ಹಲವು ಭಾಗಗಳಾಗಿಯೂ ತೆರೆಕಾಣಲಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಸುದ್ದಿಯಾದಂತೆ, ಹಿಂದಿಯ ಜತೆಗೆ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ಈ ಸಿನಿಮಾ ತೆರೆಕಾಣಲಿದೆ. (ಏಜೆನ್ಸೀಸ್)