

ಆಂಧ್ರಪ್ರದೇಶ: ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟ, ನಿರ್ದೇಶಕ ಸಮುದ್ರಕನಿ, ತಮ್ಮ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ನಡುವಿನ ಬಾಂಧವ್ಯದ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ.
'ಆರ್ಆರ್ಆರ್' ಚಿತ್ರದಲ್ಲಿ ರಾಮ್ ಚರಣ್ ಅವರೊಟ್ಟಿಗೆ ಅಭಿನಯಿಸಿರುವ ನಿರ್ದೇಶಕ ಸಮುದ್ರಕನಿ, "ಸಿನಿಮಾದ ಚಿತ್ರೀಕರಣ ಸಮಯದಿಂದ ರಾಮ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ರಾಜಮೌಳಿ ಅವರ ಈ ಚಿತ್ರದಿಂದ ರಾಮ್ ಚರಣ್ ನನಗೆ ತುಂಬಾ ಹತ್ತಿರವಾದರು. ಈಗ ಅವರು ನನ್ನ ಸ್ವಂತ ಮಗನಂತೆ" ಎಂದು ಹೇಳಿದ್ದಾರೆ. ಸದ್ಯ ಈ ಮಾತಿಗೆ ಮೆಗಾಸ್ಟಾರ್ ಪುತ್ರನ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಮ್ಮ ಸಂಬಂಧ ಹೀಗಿ ಇರಲಿ ಎಂದು ಆಶಿಸಿದ್ದಾರೆ.
ಮುಂಬರುವ 'ಗೇಮ್ ಚೇಂಜರ್' ಚಿತ್ರದಲ್ಲಿ ಸಮುದ್ರಕನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎಸ್‌ಜೆ ಸೂರ್ಯ, ಅಂಜಲಿ, ಜಯರಾಮ್, ಸುನೀಲ್, ನವೀನ್ ಚಂದ್ರ, ಶ್ರೀಕಾಂತ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2024ರ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ,(ಏಜೆನ್ಸೀಸ್).