ಹೊಸ ನಾಯಕಿಯನ್ನು ಪರಿಚಯಿಸಲು ಸಜ್ಜಾದ ನಿರ್ದೇಶಕ ಪುರಿ ಜಗನ್ನಾಥ್; ಯಾರು ಆ ನಾಯಕಿ?

Untitled design (40)
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಇದೀಗ ಮತ್ತೊಮ್ಮೆ ಹೊಸ ನಟಿಯನ್ನು ಟಾಲಿವುಡ್​​​ಗೆ ಪರಿಚಯಿಸಲು ಸಜ್ಜಾಗಿದ್ದಾರೆ.

ಈ ಹಿಂದೆ ಲೈಗರ್​ ಚಿತ್ರಕ್ಕೆ ನಟ ವಿಜಯ್ ದೇವರಕೊಂಡ ಅವರಿಗೆ ನಾಯಕಿಯಾಗಿ ಬಾಲಿವುಡ್​​ ನಟಿ ಅನನ್ಯ ಪಾಂಡೆಯನ್ನು ಕರೆತರುವ ಮೂಲಕ ತೆಲುಗು ಸಿನಿಪ್ರೇಕ್ಷಕರಿಗೆ ಪರಿಚಯಿಸಿದ್ದರು. ಸದ್ಯ ಇದೇ ಸಾಲಿನಲ್ಲಿ ಈಗ ಮತ್ತೊಬ್ಬ ನಾಯಕಿಯನ್ನು ಹೊಸ ಚಿತ್ರದ ಮೂಲಕ ಪರಿಚಯಿಸಲು ನಿರ್ದೇಶಕ ಪುರಿ ಜಗನ್ನಾಥ್​​ ತಯಾರಿ ನಡೆಸುತ್ತಿದ್ದಾರೆ ಎಂದು ಇತ್ತೀಚಿನ ಸಿನಿ ವರದಿ ಮಾಹಿತಿ ನೀಡಿದೆ.

ಪುರಿ ಅವರ ಈ ಹೊಸ ಚಿತ್ರಕ್ಕೆ ಹೊಸ ನಟಿಯ ಹುಡುಕಾಟದಲ್ಲಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಶೀಘ್ರದಲ್ಲೇ ಚಿತ್ರರಸಿಕರು ಮತ್ತು ಅಭಿಮಾನಿಗಳೊಂದಿಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net