ನಿರ್ದೇಶಕ ಪವನ್ ಒಡೆಯರ್ ಮನೆಗೆ ಲಕ್ಷ್ಮಿಆಗಮನ; ಎರಡನೇ ಬಾರಿ ತಾಯಿಯಾದ ಅಪೇಕ್ಷಾ ಪುರೋಹಿತ್

PavanWadeyar
Published on

ಬೆಂಗಳೂರು: ಸ್ಯಾಂಡಲ್​​ವುಡ್​ನ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ ನಟಿ ಅಪೇಕ್ಷಾ ಪುರೋಹಿತ್ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಕುಟುಂಬದಲ್ಲಿ ಸಂತಸ ಮೂಡಿದೆ.

ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ಬಾಳಲ್ಲಿ ಎರಡನೇ ಮಗುವಿನ ಆಗಮನವಾಗಿದೆ. ಅಪೇಕ್ಷಾ ಪುರೋಹಿತ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಪವನ್ ಒಡೆಯರ್ ಅವರೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಹೆಣ್ಣು ಮಗು ಜನಿಸಿದೆ’ ಎಂದು ಪವನ್ ಒಡೆಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ.  ಈ ಫೋಟೋದಲ್ಲಿ ಅಪೇಕ್ಷಾ ಬೆಡ್ ಮೇಲೆ ಮಲಗಿದ್ದಾರೆ. ಪಕ್ಕದಲ್ಲಿ ಪವನ್ ಒಡೆಯರ್ ಇದ್ದಾರೆನೆಟ್ಟಿಗರು ಕಾಮೆಂಟ್​ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ.

ಅಪೇಕ್ಷಾ ಪುರೋಹಿತ್ ಅವರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಫ್ಯಾಷನ್ ಡಿಸೈನರ್ ಆಗಿಯೂ ಗಮನ ಸೆಳೆದಿದ್ದಾರೆ. ಪವನ್ ಒಡೆಯರ್ ಅವರು 2012ರಲ್ಲಿ ಚಿತ್ರಂಗಕ್ಕೆ ಕಾಲಿಟ್ಟರು. ‘ಗೋವಿಂದಾಯ ನಮಃ’ ಅವರ ಮೊದಲ ನಿರ್ದೇಶನದ ಸಿನಿಮಾ. 2013ರಲ್ಲಿ ರಿಲೀಸ್ ಆದ ‘ಗೂಗ್ಲಿ’ ಸೂಪರ್ ಹಿಟ್ ಎನಿಸಿಕೊಂಡಿತು. 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಿರ್ದೇಶಕ ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಪುರೋಹಿತ್ ಅವರಿಗೆ ಈಗಾಗಲೇ ಶೌರ್ಯ ಎಂಬ ಗಂಡು ಮಗನಿದ್ದಾನೆ. ಇದೀಗ ಅವರ ಬಾಳಲ್ಲಿ ಮಹಾಲಕ್ಷ್ಮಿಯ ಆಗಮನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net