More

    ಬಂದ್​ ಆಗುವುದಿಲ್ಲ ಶಿರಡಿ ಬಾಬಾ ದೇವಾಸ್ಥಾನ, ದರ್ಶನಕ್ಕೆ ಭಕ್ತರಿಗೆ ಅವಕಾಶ; ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಮುಗ್ಲಿಕರ್​ ಸ್ಪಷ್ಟನೆ

    ಶಿರಡಿ: ಸಾಯಿ ಬಾಬಾನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ತೆರೆದಿರುತ್ತದೆ ದೇವಾಸ್ಥಾನ ಎಂದು ಶಿರಡಿ ಸಾಯಿ ದೇಗುಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಮುಗ್ಲಿಕರ್​ ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳಲ್ಲಿ ಭಾನುವಾರ (ಜ.19)ದಿಂದ ಸಾಯಿಬಾಬಾನ ದೇಗುಲ ಬಂದ್​ ಇರುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ದೇವಾಸ್ಥಾನ ತೆರೆದಿದ್ದು, ಬಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

    ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಪ್ರಭಾನಿ ಜಿಲ್ಲೆಯ ಪಥ್ರಿ ಎಂಬ ಗ್ರಾಮವೇ ಸಾಯಿ ಬಾಬಾ ಅವರ ಜನ್ಮ ಸ್ಥಳ ಎಂದಿದ್ದರು. ಅಲ್ಲದೆ ಈ ಬಾರಿ ಬಜೆಟ್​ನಲ್ಲಿ ಸಾಯಿ ಬಾಬಾ ಜನ್ಮ ಸ್ಥಳವಾದ ಪಥ್ರಿ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು ಎಂದು ಘೋಷಿಸಿದ್ದರು.

    ಉದ್ಧವ್​ ಠಾಕ್ರೆ ಅವರ ಈ ಹೇಳಿಕೆಯಿಂದಾಗಿ ವಿವಾದ ಉಂಟಾಗಿತ್ತು. ಈ ನಡುವೆ ಶಿರಡಿಯ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್​ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಭಾನುವಾರದಿಂದ ದೇಗುಲ ಬಂದ್​ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿತ್ತು.

    ಆದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್​ ಮುಗ್ಲಿಕರ್​ ಅದನ್ನು ಅಲ್ಲಗಳೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts