

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ತನ್ನ ವಾಗ್ದಾಳಿಯನ್ನು ಮುಮದುವರೆಸಿರುವ ರಾಜ್ಯ ಬಿಜೆಪಿ ಘಟಕ ಶನಿವಾರ ಜನರ ತಲೆ ಮೇಲೆ ಗೂಬೆ ಕೂರಿಸುವುದು ಬಿಟ್ಟು ಕೆಲಸ ಮಾಡಿ ಎಂದು ಸಚಿವ ದಿನೇಶ್ ಗುಂಡೂರಾವ್ ಅವರನ್ನು ಗುರಿಯಾಗಿಸಿ ಟ್ವೀಟ್ ಮಾಡಿ ಕೆಣಕಿತ್ತು.
ಬಿಜೆಪಿ ಮಾಡಿದ್ದ ಟ್ವೀಟ್ಗೆ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದು, ಜನರ ಕಿವಿಗೆ ಹೂ ಇಡುವ ಬದಲು ನಿಮ್ಮ ಮೋದಿಯವರು ಕುಂಬಳಕಾಯಿಯನ್ನೇ ಇಡುತ್ತಿದ್ದಾರೆ ಎಂದು ಲೇವಡಿಯಾಡಿದ್ಧಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್ BJPಯವರೇ, ಬೆಲೆಯೇರಿಕೆಯ ವಿಷಯದಲ್ಲಿ ಕಳೆದ 10ವರ್ಷಗಳಿಂದ ಜನರ ಕಿವಿಗೆ ಹೂ ಇಡುವ ಬದಲು ನಿಮ್ಮ ಮೋದಿಯವರು ಕುಂಬಳಕಾಯಿಯನ್ನೇ ಇಡುತ್ತಿದ್ದಾರೆ. ಪೆಟ್ರೋಲ್. ಡೀಸೆಲ್, ಸಿಲಿಂಡರ್ ಹಾಗೂ ಅಡುಗೆ ಎಣ್ಣೆಯ ಬೆಲೆಯನ್ನು ಹೆಚ್ಚಿಸಿದ್ದು ಐಆರು ಎಂದು ಪ್ರಶ್ನಿಸಿದ್ಧಾರೆ.
ಬಿಜಪಿಯವರೇ ನಾವು ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ತಂದಿದ್ದೇ ನಿಮ್ಮ ಮೋದಿ ಸರ್ಕಾರದ ಬೆಲೆಯೇರಿಕೆಯಿಂದ ಸಾಮಾನ್ಯ ಜನರನ್ನು ಪಾರು ಮಾಡಲು. ಇದು ನಿಮಗೆ ತಿಳಿದಿರಲಿ. ಇಂದಿನ ಬೆಲೆಯೇರಿಕೆಗೆ ಮೋದಿಯವರಲ್ಲದೇ ಬೇರ್ಯಾರು ಕಾರಣ. ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬೆಲೆಯೇರಿಕೆಗೆ ಯಾರು ಕಾರಣ ಎಂದು ಪ್ರಶ್ನಿಸಿಕೊಳ್ಳಲಿ ಎಂದು ಸವಾಲೆಸೆದಿದ್ದಾರೆ.
ಬಿಜೆಪಿಯವರೇ, ರಾಜ್ಯದ ಮಹಿಳೆಯರು ತಿರುಗಿಬಿದ್ದಿರುವುದು, ಸಿಟ್ಟಿಗೆದ್ದಿರುವುದು ನಮ್ಮ ಮೇಲಲ್ಲ. ಅವರ ಸಿಟ್ಟು ಸೆಡವು, ಹತಾಶೆಗಳು ನಿಮ್ಮ ಮೋದಿ ಸರ್ಕಾರದ ಕುರುಡು ಆರ್ಥಿಕ ನೀತಿಗಳ ಬಗ್ಗೆ. ಅದು ಈಗಾಗಲೇ ರಾಜ್ಯದ ಫಲಿತಾಂಶದಲ್ಲಿ ಸಾಬೀತಾಗಿದೆ. ಹೀಗಿರುವಾಗ ಆಕಾಶಕ್ಕೆ ಉಗುಳುವ ಮೂರ್ಖತನವೇಕೆ ಎಂದು ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಗರಿಗೆ ಟಾಂಗ್ ಕೊಟ್ಟಿದ್ಧಾರೆ.