ಕರಗಿದ ರೈಲ್ವೆ ಹಳಿಗಳು; ಲೋಕೋ ಪೈಲಟ್​ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅವಘಡ

neelanchal Express
Published on

ಲಖನೌ: ಜೂನ್ 02ರಂದು ಒಡಿಶಾದ ಬಾಲಾಸೋರ್​ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದ ಲಖನೌನಲ್ಲಿ ಲೋಕೋ ಪೈಲಟ್​ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ಒಂದು ತಪ್ಪಿದೆ.

ಲಖನೌನ ನಿಗೋಹಾನ್​ ರೈಲು ನಿಲ್ದಾಣದಲ್ಲಿ ರೈಲು ಹಳಿಗಳು ವಕ್ರಗೊಂಡಿದ್ದು, ಇದನ್ನು ಗಮನಿಸಿದ ಲೋಕೋ ಪೈಲಟ್​ ದೊಡ್ಡ ಅನಾಹುತವನ್ನು ತಪ್ಪಿಸಿದ್ಧಾರೆ. ಘಟನೆಯೂ ಶನಿವಾರ ಸಂಜೆ 5 ಘಂಟೆ ಸುಮಾರಿಗೆ ಸಂಭವಿಸಿದ್ದು, ನೀಲಾಂಚಲ್​ ಎಕ್ಸ್​ಪ್ರೆಸ್​ ರೈಲು ಮುಖ್ಯ ಲೈನ್​ ಬದಲು ಲೂಪ್​ಲೈನ್​ನಲ್ಲಿ ಹಾದು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ರೈಲು ಹಾದುಹೋಗುವ ವೇಳೆ ಕಬ್ಬಿಣ ಕರಗಿದ ವಾಸನೆಯನ್ನು ಗ್ರಹಿಸಿದ ಲೋಕೋ ಪೈಲಟ್​ ಕೂಡಲೇ ರೈಲನ್ನು ನಿಲ್ಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ ಹಳಿಗಳ ದುರಸ್ಥಿ ಕಾರ್ಯದಲ್ಲಿ ತೊಡಗಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿ ಒಬ್ಬರು ಕಳಪೆ ಟ್ರ್ಯಾಕ್​ ನಿರ್ವಹಣೆಯಿಂದಾಗಿ ಈ ರೀತಿ ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಕರಣ ಸಂಬಂಧ ಲಖನೌ ರೈಲ್ವೇ ವಿಭಾಗೀಯ ಮ್ಯಾನೇಜರ್​ ಸುರೇಶ್​ ಸಪ್ರಾ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net