ಮೋದಿ ಅವರು ಭ್ರಷ್ಟರು, ಕ್ರಿಮಿನಲ್ಸ್ ಪರ ಪ್ರಚಾರ ಮಾಡುತ್ತಿದ್ದಾರೆ: ದಿನೇಶ್ ಗುಂಡೂರಾವ್

Dinesh Gundu Rao
Published on

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮೋದಿ ಭ್ರಷ್ಟರು, ಕ್ರಿಮಿನಲ್ಸ್ ಪರ ಪ್ರಚಾರ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆಆದರೂ ಪ್ರಧಾನಿಗಳು ಯಾಕೆ ಭ್ರಷ್ಟ ಸರ್ಕಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈಗ ಯಾರಿಗೆ ಅಚ್ಚೇ ದಿನ ಬಂದಿದೆ?. ಅದಾನಿ, ಅಂಬಾನಿಗೆ ಮಾತ್ರ ಅಚ್ಚೇದಿನ್ ಇದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಆಡಳಿತ ವರ್ಗ ಲೂಟಿಯಲ್ಲಿ ತೊಡಗಿದೆ. ಮೋದಿ ಭಾಷಣಕ್ಕಿಂತ, ಭ್ರಷ್ಟಾಚಾರ ಮೇಲೆ ಕ್ರಮ ಆಗಬೇಕಿತ್ತು. ಆಗ ಸಮಯ ಕೊಡದ ಮೋದಿ ಈಗ ಯಾಕೆ ಇಷ್ಟೋಂದು ಕೊಡುತ್ತಿದ್ದಾರೆ. ನಾವು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಭರವಸೆಗಳನ್ನ ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net