More

    ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ವಿಚಾರ: ವಿ. ಸೋಮಣ್ಣ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

    ಮೈಸೂರು: ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಇದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ‌ ಪ್ರಮುಖ ಕಾರ್ಯಕರ್ತನಿಗೆ ಮೂಳೆ ಜರುಗಿದೆ. ಅನಸ್ತೇಶಿಯ ಕೊಟ್ಟು ಸರಿ ಮಾಡಿದ್ದಾರೆ. ಆತ ತುಂಬಾ ವಿಶ್ರಾಂತಿ ತೆಗೆದುಕೊಳ್ಳಬೇಕು. ಮುಂದೆ ಸರಿಯಾಗಲಿಲ್ಲ ಅಂದರೆ ಆಪರೇಷನ್ ಮಾಡಬೇಕಾಗುತ್ತದೆ. ಹತಾಶ ಮನೋಭಾವದಲ್ಲಿ ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದರು.

    ಇದನ್ನೂ ಓದಿ: ಲೋಕಸಭಾ ಚುನಾವಣೆ ಎಫೆಕ್ಟ್​! ಸುಮಲತಾ ಪದೇಪದೆ ಕೆಣಕುತ್ತಿದ್ರು ತುಟಿ ಬಿಚ್ಚದ ಜೆಡಿಎಸ್​ ನಾಯಕರು

    ಗೂಗಲ್ ಹಾಕೊಂಡು ನೋಡಿ

    ವರುಣ ಕ್ಷೇತ್ರದಲ್ಲಿ ಒಂದು ಗ್ಯಾಂಗ್​ ರೆಡಿಯಾಗಿದೆ. ನಾನು ಎಲ್ಲಿ ಪ್ರಚಾರಕ್ಕೆ ಹೋಗ್ತೀನೋ ಅಲ್ಲಿ ಬರ್ತಾರೆ. ರಸ್ತೆಗೆ ನೊಗ ಅಡ್ಡ ಇಟ್ಟು ಪ್ರಚಾರಕ್ಕೆ ಅಡ್ಡಿ ಮಾಡಿದ್ದರು. ಈ ರೀತಿಯಾದ್ರೆ ಈ ರಾಜ್ಯದ ವ್ಯವಸ್ಥೆಯನ್ನು ಹೇಗೆ ಕಾಪಾಡಬೇಕಾಗುತ್ತದೆ ಅರ್ಥ ಮಾಡಿಕೊಳ್ಳಿ. ನಾನು ನನ್ನ ಕ್ಷೇತ್ರದಲ್ಲಿ ಜನರಿಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅದನ್ನ ಗೂಗಲ್ ಹಾಕೊಂಡು ನೋಡಿ. ದ್ವೇಷದ ರಾಜಕಾರಣ ಸಿದ್ದರಾಮಯ್ಯಗೆ ಎಷ್ಟು ಶೋಭೆ ತರುತ್ತೋ ಗೊತ್ತಿಲ್ಲ ಎಂದರು ಟೀಕಿಸಿದರು.

    ಹತಾಶ ಮನೋಭಾವ

    ಈ ರೀತಿ ಘಟನೆ ಮುಂದುವರೆದರೆ ನಾನು ಸಹಿಸುವುದಿಲ್ಲ. ಸಿದ್ದರಾಮಯ್ಯ ನಾನು ಒಟ್ಟಿಗೆ ಇದ್ದಾಗ ಅವರ ಚುನಾವಣೆ ನೋಡಿದ್ದೇನೆ. ದೇವಲಾಪುರದಲ್ಲಿ ಒದೆ ತಿಂದಿದ್ದೇನೆ. ನನ್ನ ಸಮಾಜವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದೆ. ಅಂದು ನೀವು ನನ್ನಂತೆ ಮಂತ್ರಿ ಆಗಿದ್ರಿ. ಇಂದು ನೀವು ಮಾಜಿ ಮುಖ್ಯಮಂತ್ರಿ ಆಗಿದ್ದೀರಿ. ನಿಮಗೆ ಇದೆಲ್ಲ ಶೋಭೆ ತರುವುದಿಲ್ಲ. ಯಾರೂ ಇಲ್ಲಿ ಎತ್ತಿ ಕಟ್ಟುತ್ತಿಲ್ಲ. ಹತಾಶ ಮನೋಭಾವದಿಂದ ಹೀಗೆ ಮಾಡುತ್ತಿದ್ದಾರೆ. ಅವರ ಅಣ್ಣನ ಮಕ್ಕಳೇ ಇದರಲ್ಲಿ ಸೇರಿಕೊಂಡಿದ್ದಾರೆ. ಪೊಲೀಸರು ಕೂಡ ಇದರಲ್ಲಿ ಕುತಂತ್ರ ಮಾಡಿದ್ದಾರೆ. ಚುನಾವಣೆ ಆಯೋಗಕ್ಕೆ ದೂರು ಕೊಡುತ್ತೇನೆಂದು ಹೇಳಿದರು.

    ಇದನ್ನೂ ಓದಿ: ಆಮಿಷಕ್ಕೆ ಒಳಗಾಗದೇ ಯೋಗ್ಯರನ್ನು ಆರಿಸಿ: ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಸಲಹೆ

    ಇದು ಸೂಕ್ಷ್ಮ ಕ್ಷೇತ್ರವಾಗಿದೆ. ಈ ಬಗ್ಗೆ ಗಮನಿಸಬೇಕು, ಇಲ್ಲವಾದರೆ ಕಷ್ಟವಾಗುತ್ತದೆ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ನಾನಗೆ ಯಾವುದೇ ರಕ್ಷಣೆ ಬೇಡ, ವರುಣ ಕ್ಷೇತ್ರದ ಜನರೇ ರಕ್ಷಣೆ ಎಂದರು. (ದಿಗ್ವಿಜಯ ನ್ಯೂಸ್​)

    ತಾಳಿಕೋಟೆಯಲ್ಲಿ ಅಬ್ಬರಿಸಿದ ರಾಜಾಹುಲಿ; ಭಾವೈಕ್ಯತೆ ಸಂದೇಶ ಸಾರಿದ ಬಿಎಸ್​ವೈ

    ನನ್ನನ್ನು ಸೋಲಿಸಬೇಕೆಂದೇ ಬಿಜೆಪಿ-ಕಾಂಗ್ರೆಸ್​ ಒಂದಾಗಿದೆ: ನಿಖಿಲ್​ ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts