

ಮುಂಬೈ: ಬಾಲಿವುಡ್ನ ಬಾಬಿ ಅಂದರೆ ಡಿಂಪಲ್ ಕಪಾಡಿಯಾ, 80ರ ದಶಕದ ಸುಂದರ ನಾಯಕಿಯರಲ್ಲಿ ಇವರ ಒಬ್ಬರು ಎಂದರೆ ತಪ್ಪಾಗಲಾರದು. ಸಾಕಷ್ಟು ಧೈರ್ಯಶಾಲಿಯಾದ ಡಿಂಪಲ್ ಕಪಾಡಿಯಾ ಆ ಸಮಯದಲ್ಲೇ ತಮ್ಮ ಮೊದಲ ಚಿತ್ರದಲ್ಲೇ ಬಿಕಿನಿ ತೊಟ್ಟು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದರು. ಅವರ ಮೊದಲ ಸಿನಿಮಾ ಬಾಬಿ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿತ್ತು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿಂಪಲ್ ಕಪಾಡಿಯಾ, ನನಗೆ 12ನೇ ವಯಸ್ಸಿನಲ್ಲಿ ಕುಷ್ಠರೋಗವಿತ್ತು ಆದರೆ ಬಳಿಕ ಗುಣವಾಯಿತು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಕುಟುಂಬ ಸ್ನೇಹಿತರೊಬ್ಬರು ತನ್ನ ಶಾಲೆಯಿಂದ ಬಹಿಷ್ಕರಿಸುತ್ತಾರೆ ಎಂದು ಬೆದರಿಸಿದ್ದರು ಎಂದು ಹೇಳಿದ್ದಾರೆ.
ನನ್ನ ತಂದೆ ಚುನ್ನಿಭಾಯ್ ಕಪಾಡಿಯಾ ಚಿತ್ರರಂಗದ ಅನೇಕರಿಗೆ ಪರಿಚಿತರು. ಆ ಕಾಲದ ಖ್ಯಾತ ನಿರ್ದೇಶಕರೊಬ್ಬರು ಕುಟುಂಬದ ಸ್ನೇಹಿತನಂತೆ ಇದ್ದರು. ನಾನು ಕುಷ್ಠರೋಗದಿಂದ ಬಳಲುತ್ತಿದ್ದಾಗ ನನಗೆ ಸುಮಾರು 12 ವರ್ಷ. ನಾನು ಅದನ್ನು ನನ್ನ ಮೊಣಕೈಯಲ್ಲಿ ಹೊಂದಿದ್ದೆ. ಸ್ನೇಹಿತನಂತಿದ್ದ ಆ ನಿರ್ದೇಶಕ, ನೀವು ಶಾಲೆಯಿಂದ ಬಹಿಷ್ಕೃತ ಆಗುವುದನ್ನು ನಾನು ನೋಡುತ್ತೇನೆ ಎಂದು ಹೇಳಿದ್ದರು. ಆ ಪದವನ್ನು ನಾನು ಮೊದಲ ಬಾರಿಗೆ ಕೇಳಿದೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ಬಳಿಕ ಕುಷ್ಠರೋಗ ಗುಣವಾಯಿತು ಎಂದು ಡಿಂಪಲ್ ನೆನಪಿಸಿಕೊಂಡರು. (ಏಜೆನ್ಸೀಸ್)