ಬಂಟ್ವಾಳ: ಶಿಕ್ಷಣ ಫೌಂಡೇಶನ್ ಸಂಸ್ಥೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ ಒಂದು ದಿನದ ಡಿಜಿಟಲ್ ಸಾಕ್ಷರತೆ ಹಾಗೂ ನಾಯಕತ್ವ ಮತ್ತು ಸಹಭಾಗಿತ್ವ ತರಬೇತಿಯನ್ನು ಬಂಟ್ವಾಳ ತಾಲೂಕು ಪಂಚಾಯಿತಿಯಲ್ಲಿ ಆಯೋಜಿಸಲಾಗಿತ್ತು.
ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಣ ಫೌಂಡೇಶನ್ ವತಿಯಿಂದ ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳಿಗೆ ಅನೇಕ ಡಿಜಿಟಲ್ ಸಾಧನ ಒದಗಿಸಿದ್ದು, ಅವುಗಳ ಸಹಾಯದಿಂದ ಗ್ರಾಮೀಣ ಭಾಗದ ಸಮುದಾಯದ ಜನರು ಡಿಜಿಟಲ್ ಸಾಕ್ಷರರಾಗಬೇಕು ಎಂದರು.
ಶಿಕ್ಷಣ ಫೌಂಡೇಶನ್ ಉಡುಪಿ ಜಿಲ್ಲಾ ಸಂಯೋಜಕಿ ರೀನಾ ಹೆಗಡೆ ತರಬೇತಿ ನಡೆಸಿಕೊಟ್ಟರು. ಬಂಟ್ವಾಳ ತಾಪಂ ವ್ಯವಸ್ಥಾಪಕ ಪ್ರಕಾಶ್, ಗ್ರಂಥಾಲಯ ಮೇಲ್ವಿಚಾರಕರ ವಿಷಯ ನಿರ್ವಾಹಕ ಅಶೋಕ್ ಕುಮಾರ್, ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ಲವೀಶ್ ಕುಮಾರ್ ಉಪಸ್ಥಿತರಿದ್ದರು.
53 ಅರಿವು ಕೇಂದ್ರಗಳ ಮೇಲ್ವಿಚಾರಕರು ಭಾಗವಹಿಸಿದ್ದರು. ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕಿ ಸುಮತಿ ನಿರ್ವಹಿಸಿದರು. ಪುಣಚ ಗ್ರಾಪಂ ಅರಿವು ಕೇಂದ್ರ ಮೇಲ್ವಿಚಾರಕಿ ಜಯಲಕ್ಷ್ಮೀ ಸ್ವಾಗತಿಸಿದರು. ಕೇಪು ಗ್ರಾಪಂ ಅರಿವು ಕೇಂದ್ರ ಮೇಲ್ವಿಚಾರಕಿ ಭವ್ಯಾ ಕುಮಾರಿ ವಂದಿಸಿದರು.