More

    ಟೈಟಲ್​ನಲ್ಲೇ ಎಳ್ಳು-ಬೆಲ್ಲ-ಕಬ್ಬು; ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!

    ಬೆಂಗಳೂರು: ಯಾವಾಗಲೂ ತನ್ನ ವೈಶಿಷ್ಟ್ಯದೊಂದಿಗೇ ಗಮನ ಸೆಳೆಯುವ ನಟ-ನಿರ್ದೇಶಕ ಉಪೇಂದ್ರ, ಇದೀಗ ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಯುಐ’ ತಂಡದಿಂದ ಸಂಕ್ರಾಂತಿ ಶುಭಾಶಯ ಕೋರುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾರೆ.

    ರಿಯಲ್​ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾದ ಟೈಟಲ್​ಗಳೇ ಡಿಫರೆಂಟ್ ಆಗಿರುತ್ತವೆ. ಅದೇ ರೀತಿ ಅವರು ನಿರ್ದೇಶನ ಮಾಡುತ್ತಿರುವ ನೂತನ ಸಿನಿಮಾ ಹೆಸರೇ ‘ನಾಮ’ದ ರೂಪದಲ್ಲಿದ್ದು ಘೋಷಣೆ ಆದಾಗಲೇ ಭಾರಿ ಗಮನ ಸೆಳೆಯಲಾಗಿತ್ತು. ದೇವರ ನಾಮದ ರೂಪದಲ್ಲಿ ವಿನ್ಯಾಸ ಮಾಡಲಾಗಿರುವ ಈ ಚಿತ್ರದ ಶೀರ್ಷಿಕೆಯನ್ನು ‘ಯುಐ’ ಎಂದು ರಿಜಿಸ್ಟರ್​ ಮಾಡಿಕೊಂಡಿದ್ದರೂ ಅದನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

    ಈಗ ಇದೇ ಚಿತ್ರತಂಡದ ಮೂಲಕ ಮಕರ ಸಂಕ್ರಮಣದ ಶುಭಾಶಯವನ್ನು ಕೋರಲಾಗಿದ್ದು, ಆ ಕುರಿತ ವಿಶಿಷ್ಟವಾದ ಪೋಸ್ಟರನ್ನು ಉಪೇಂದ್ರ ಸೇರಿದಂತೆ ಚಿತ್ರತಂಡದವರು ಹಂಚಿಕೊಂಡಿದ್ದಾರೆ. ‘ಯುಐ’ ಎಂದಿರುವ ಈ ಚಿತ್ರದ ಟೈಟಲನ್ನು ‘ಯು’ ಅಕ್ಷರದೊಳಗೆ ‘ಐ’ ಅಕ್ಷರ ಬರುವಂತೆಯೂ ವಿನ್ಯಾಸ ಮಾಡಲಾಗಿದೆ. ಅದನ್ನೇ ಮಕರ ಸಂಕ್ರಾಂತಿಗೆ ಶುಭ ಹಾರೈಸುವಾಗ ಎಳ್ಳುಬೆಲ್ಲದಿಂದಲೇ ಯು ರಚಿಸಿ, ಕಬ್ಬಿನ ತುಂಡೊಂದನ್ನು ಐ ರೀತಿ ಇರಿಸಿ ವಿಶಿಷ್ಟವಾಗಿ ಶುಭ ಕೋರಲಾಗಿದೆ. ಹೀಗೆ ಸಂಕ್ರಾಂತಿಯ ಶುಭ ಕೋರುವಲ್ಲಿಯೂ ಕ್ರಿಯೇಟಿವಿಟಿಯನ್ನು ತೋರಿರುವುದು ಸೋಷಿಯಲ್ ಮೀಡಿಯಾದಲ್ಲಿ ಈಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಮತ್ತೆ ತಲೆಗೆ ಹುಳಬಿಟ್ಟ ಉಪೇಂದ್ರ; ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರನಾ?

    ಲಹರಿ ಫಿಲ್ಮ್ಸ್​ ಮತ್ತು ವೀನಸ್ ಎಂಟರ್​ಪ್ರೈಸಸ್ ಬ್ಯಾನರ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಜಿ.ಮನೋಹರನ್, ಕೆ.ಪಿ.ಶ್ರೀಕಾಂತ್ ಜೊತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿ ಬಹುತೇಕ ಚಿತ್ರೀಕರಣ ಆಗಿದ್ದು, ಸಿನಿಮಾ ತನ್ನ ವೈಶಿಷ್ಟ್ಯಗಳಿಂದಲೇ ಕ್ರೇಜ್ ಹುಟ್ಟಿಸಿದೆ.

    ಟೈಟಲ್​ನಲ್ಲೇ ಎಳ್ಳು-ಬೆಲ್ಲ-ಕಬ್ಬು; ಉಪೇಂದ್ರ ನಿರ್ದೇಶನದ 'ಯುಐ' ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts