More

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ಬೆಂಗಳೂರು: ವಿಶ್ವಪರ್ಯಟನೆ ಮಾಡುತ್ತ, ಕನ್ನಡದಲ್ಲೇ ವಿಶ್ವದ ಪರಿಚಯ ಮಾಡಿಸುತ್ತ ಲಕ್ಷಾಂತರ ಜನರ ಮನಸೂರೆಗೊಳಿಸಿರುವ ಡಾ.ಬ್ರೋ (ಗಗನ್ ಶ್ರೀನಿವಾಸ್) ‘ರೋಮಿಂಗ್ ಸ್ಟಾರ್’ ಎಂದರೂ ಅತಿಶಯೋಕ್ತಿ ಅಲ್ಲ. ಅದರಲ್ಲೂ ಇನ್ನೊಂದು ವಿಷಯದಲ್ಲಂತೂ ಅವರನ್ನು ‘ಸೂಪರ್​ ಸ್ಟಾರ್’ ಎಂದೇ ಹೇಳಬಹುದು.

    ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್​ವುಡ್​ನಲ್ಲೂ ಸಿನಿಮಾ ಸ್ಟಾರ್​ಗಳು ಬೆಟ್ಟಿಂಗ್ ಆ್ಯಪ್​ನಂಥವುಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಹಾಗೆ ಅಂಥವುಗಳಲ್ಲಿ ಕಾಣಿಸಿಕೊಂಡ ಕಾರಣಕ್ಕೆ ಕೆಲವು ಸ್ಟಾರ್ ನಟರು ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದೂ ಉಂಟು. ಆದರೆ ಈ ವಿಷಯದಲ್ಲಿ ಡಾ.ಬ್ರೋ ಸ್ವಯಂನಿಯಂತ್ರಣ ಹಾಕಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.

    1 ನಿಮಿಷಕ್ಕೆ 70 ಸಾವಿರ ಕೊಟ್ರೂ ಬೇಡ: ಗಗನ್​ಗೆ ಯೂಟ್ಯೂಬ್​ನಲ್ಲಿ 11 ಲಕ್ಷ, ಫೇಸ್​ಬುಕ್​ನಲ್ಲೂ 11 ಲಕ್ಷ ಫಾಲೋವರ್ಸ್​ ಇದ್ದಾರೆ. ಅವರು ಒಂದೊಂದು ಕಂಟೆಂಟ್​ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನಕ್ಕೆ ತಲುಪಿ ಸಾವಿರಾರು ಪ್ರತಿಕ್ರಿಯೆ ಪಡೆಯುತ್ತದೆ. ಅದೇ ಕಾರಣಕ್ಕೆ ಹಲವರು ಜಾಹೀರಾತು ಕೊಡಲು ಮುಂದೆ ಬರುತ್ತಾರೆ. ಆದರೆ ಈ ವಿಷಯದಲ್ಲೂ ಗಗನ್​ ಕಟ್ಟುನಿಟ್ಟು. ಬೆಟ್ಟಿಂಗ್​ ಆ್ಯಪ್​ನವರು 1 ನಿಮಿಷದ ಜಾಹೀರಾತಿಗೆ ಸುಮಾರು 70 ಸಾವಿರ ರೂ. ಕೊಡುತ್ತಾರೆ. ಆದರೆ ಅಂಥ ಜಾಹೀರಾತು ನಾನು ಸ್ವೀಕರಿಸುವುದಿಲ್ಲ. ಜನ ನಮಗೆ ಹೆಸರು ಕೊಟ್ಟು ದುಡ್ಡೂ ಕೊಡುವಾಗ ನಾವ್ಯಾಕೆ ಅವರಿಗೆ ಅಂಥ ಆ್ಯಪ್​ ಕೊಡಬೇಕು, ಆ ಕೆಲಸ ನಾನು ಮಾಡಲ್ಲ. ಜನರಿಗೆ ಪ್ರಯೋಜನವಾಗುವ ಜಾಹೀರಾತು ಮಾತ್ರ ಸ್ವೀಕರಿಸುತ್ತೇನೆ ಎನ್ನುತ್ತಾರೆ.

    ಸ್ವಾತಂತ್ರ್ಯವೇ ಮುಖ್ಯ: ಪ್ರಾಯೋಜಕತ್ವದ ವಿಷಯದಲ್ಲೂ ಗಗನ್ ಸ್ಪಷ್ಟವಾಗಿದ್ದಾರೆ. ತಮ್ಮ ಪ್ರಯಾಣಕ್ಕೆ ಯಾರದ್ದಾದರೂ ಪ್ರಾಯೋಜಕತ್ವ ಪಡೆದರೆ ನನಗೆ ಸ್ವಾತಂತ್ರ್ಯ ಇರುವುದಿಲ್ಲ. ಹಣಕ್ಕಾಗಿ ನಾನು ಸ್ವಾತಂತ್ರ್ಯ ಕಳೆದುಕೊಳ್ಳುವುದಿಲ್ಲ. ನಾಲ್ಕು ಸ್ಥಳ ನೋಡುವ ಬದಲು ಒಂದೇ ಸ್ಥಳ ನೋಡಿದರೂ ಪರವಾಗಿಲ್ಲ, ನನಗೆ ಸ್ವಾತಂತ್ರ್ಯ ಮುಖ್ಯ ಎಂಬುದು ಡಾ.ಬ್ರೋ ಖಡಕ್​ ಮಾತು.

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts