More

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ‘ನಮಸ್ಕಾರ ದೇವರು’ ಎನ್ನುತ್ತಲೇ ಕನ್ನಡಿಗರಿಗೆ ಜಗತ್ತಿನ ವಿವಿಧ ಪ್ರದೇಶಗಳನ್ನು ತೋರಿಸುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ವಿವರಿಸುತ್ತ ಮನಗೆದ್ದಿರುವ ಯೂಟ್ಯೂಬರ್ ಡಾ.ಬ್ರೋ (ಗಗನ್ ಶ್ರೀನಿವಾಸ್) ತಮ್ಮ ವಿಶ್ವಪರ್ಯಟನೆಯ ಮಧ್ಯೆ ವಿಜಯವಾಣಿ ಕಚೇರಿಗೆ ಭೇಟಿ ನೀಡಿ, ದಶ ದೇಶಗಳ ದರ್ಶನದ ಅನುಭವಗಳನ್ನು ಹಂಚಿಕೊಂಡರು. ಮುಂದಿನ ವಾರ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ನಡುವಿನ ಒಂದು ಸಣ್ಣ ಗ್ಯಾಪ್​ನಲ್ಲಿ ಸಂವಾದದಲ್ಲಿ ಪಾಲ್ಗೊಂಡು ಅನುಭವಗಳ ಬುತ್ತಿ ತೆರೆದಿಟ್ಟರು.

    ಕೋಶ ಓದಿ ನೋಡು, ದೇಶ ಸುತ್ತಿ ನೋಡು ಎಂಬ ಮಾತಿದೆ. ಕೋಶ ಓದೋದೂ ಅತಿಮುಖ್ಯ. ನಾನು ಯಾವ ದೇಶಕ್ಕೆ ಹೋದರೂ ನನ್ನ ಸಂಪಾದನೆ ಎಷ್ಟು ಅಂತ ಕೇಳಲ್ಲ, ವಿದ್ಯಾರ್ಹತೆ ಕೇಳುತ್ತಾರೆ, ಅದರಲ್ಲೇ ಅಳೆಯುತ್ತಾರೆ. ಒಂದು ಹಂತದ ವಿದ್ಯಾಭ್ಯಾಸ ಅತಿಮುಖ್ಯ. ಬಿಕಾಂ ಮುಗಿಸಿರುವ ನಾನು ಮುಂದೆ ಎಂಕಾಂ ಮುಗಿಸುತ್ತೇನೆ. ಕೆಲಸಕ್ಕೆ ಎಲ್ಲೂ ಅಪ್ಲೈ ಮಾಡಿಲ್ಲ. ಯಾರು ಎಷ್ಟೇ ಆಫರ್ ಕೊಟ್ರೂ ಇದನ್ನು ಬಿಡಲ್ಲ. ಕಲಿಯುವಂಥದ್ದೇನಾದರೂ ಇದ್ರೆ ಅಂಥ ಕೆಲಸ ಮಾಡುತ್ತೇನೆ. ದೇಶಗಳನ್ನು ಸುತ್ತಿ ಕಲಿತ ಪಾಠ ಎಂದರೆ ಸಂತೋಷ ಬೇರೆಲ್ಲೂ ಇಲ್ಲ, ನಾವಿದ್ದ ಜಾಗದಲ್ಲೇ ನೆಮ್ಮದಿ ಕಂಡುಕೊಳ್ಳಬೇಕು. ಈ ಸುತ್ತಾಟದಲ್ಲಿ ನಾನು ಕೋಪ ಕಳೆದುಕೊಂಡು ಸಹನೆ ರೂಢಿಸಿಕೊಂಡಿದ್ದೇನೆ.

    ದೇಶದೊಳಗೇ ಹತ್ತಾರು ರಾಜ್ಯಗಳಲ್ಲಿ ಪ್ರವಾಸ ಮಾಡಿ, ಈಗಾಗಲೇ ಹತ್ತು ದೇಶಗಳನ್ನು ಸುತ್ತಿ ಬಂದಿರುವ ಡಾ.ಬ್ರೋ, “ಎಲ್ಲಿಗೇ ಹೋದರೂ ನಮ್ಮೂರೇ ನಮಗೆ ಮೇಲು. ಬೆಂಗಳೂರಿಗೆ ಬಂದ ತಕ್ಷಣ ನನಗೆ ತವರಿಗೆ ಬಂದ ಹಾಗೆ ಆಗುತ್ತದೆ. ಭಾರತವೆಂದರೆ ಹೆಮ್ಮೆ. ನಾನು ಸುತ್ತಿದ ದೇಶಗಳಲ್ಲಿ ಬಹುತೇಕವು ನಮ್ಮ ಕರ್ನಾಟಕದಷ್ಟು ಜನಸಂಖ್ಯೆ ಹೊಂದಿವೆ. ಆದರೆ ನಮ್ಮ ಭಾರತ 140 ಕೋಟಿ ಜನಸಂಖ್ಯೆ ಹೊಂದಿದ್ದು, ಇಷ್ಟು ಜನಸಂಖ್ಯೆ ಇದ್ದೂ ಈ ರೀತಿ ಬೆಳವಣಿಗೆ ಕಾಣುತ್ತಿರುವುದು ಒಂಥರ ಅಚ್ಚರಿ’ ಎನ್ನುತ್ತಾರೆ.

    (ಮುಂದಿನ ಪೋಸ್ಟ್​ನಲ್ಲಿ ಉಳಿದ ಭಾಗ..)

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts