More

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ‘ನಮಸ್ಕಾರ ದೇವರು’ ಎನ್ನುತ್ತಲೇ ಕನ್ನಡಿಗರಿಗೆ ಜಗತ್ತಿನ ವಿವಿಧ ಪ್ರದೇಶಗಳನ್ನು ತೋರಿಸುತ್ತ ಅಲ್ಲಿನ ವಿಶೇಷತೆಗಳನ್ನು ಕನ್ನಡದಲ್ಲೇ ವಿವರಿಸುತ್ತ ಮನಗೆದ್ದಿರುವ ಯೂಟ್ಯೂಬರ್ ಡಾ.ಬ್ರೋ (ಗಗನ್ ಶ್ರೀನಿವಾಸ್) ತಮ್ಮ ವಿಶ್ವಪರ್ಯಟನೆಯ ಮಧ್ಯೆ ವಿಜಯವಾಣಿ ಕಚೇರಿಗೆ ಭೇಟಿ ನೀಡಿ, ದಶ ದೇಶಗಳ ದರ್ಶನದ ಅನುಭವಗಳನ್ನು ಹಂಚಿಕೊಂಡರು. ಮುಂದಿನ ವಾರ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುವ ನಡುವಿನ ಒಂದು ಸಣ್ಣ ಗ್ಯಾಪ್​ನಲ್ಲಿ ಸಂವಾದದಲ್ಲಿ ಪಾಲ್ಗೊಂಡು ಅನುಭವಗಳ ಬುತ್ತಿ ತೆರೆದಿಟ್ಟರು.

    ಬೆಂಗಳೂರು: ಡಾ.ಬ್ರೋ ಎಂದೇ ಕರೆಯಲ್ಪಡುವ ಗಗನ್ ಶ್ರೀನಿವಾಸ್​ ವಿಜಯವಾಣಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಂವಾದದಲ್ಲಿ ತಮ್ಮ ವಿಶ್ವಪರ್ಯಟನೆ ಕುರಿತು ಹಲವಾರು ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. ಅದರಲ್ಲೂ ಬಹುಮುಖ್ಯವಾಗಿ ತಾವು ಯೂಟ್ಯೂಬರ್​ ಆಗಿದ್ದೇಕೆ ಎಂಬುದನ್ನೂ ಅವರು ಇಲ್ಲಿ ಹೇಳಿಕೊಂಡಿದ್ದಾರೆ.

    ಶಾಲೆಯಲ್ಲಿ ಪಾಠ ಮಾಡುವಾಗ ಹಲವಾರು ಸಂಗತಿಗಳು ಬ್ಲ್ಯಾಕ್​ ಆ್ಯಂಡ್ ವೈಟ್ ಪುಸ್ತಕದಲ್ಲಿದ್ದವು. ಅವುಗಳನ್ನು ಶಿಕ್ಷಕರು ವೈಭವೀಕರಣ ಮಾಡಿ ಹೇಳುತ್ತಿದ್ದರು, ನಾವು ಅದನ್ನು ಕಲ್ಪನೆ ಮಾಡಿಕೊಳ್ಳಬೇಕಿತ್ತು. ಆದರೆ ಅದನ್ನು ವರ್ಚುವಲ್ ಆಗಿ ನೋಡಲಿಕ್ಕೆ ನಮಗೆ ಸಾಧ್ಯ ಇರಲಿಲ್ಲ, ಆವಾಗೆಲ್ಲ ಫೋನ್ ಕೂಡ ಅಷ್ಟು ಇರಲಿಲ್ಲ, ಅದನ್ನೆಲ್ಲ ರಿಯಲ್ ಆಗಿ ಫೀಲ್ ಮಾಡಲಿಕ್ಕೆ ಅಂತನೇ ಯೂಟ್ಯೂಬರ್ ಆದೆ ಎಂದು ಡಾ.ಬ್ರೋ ಹೇಳಿದ್ದಾರೆ.

    ನಾನು 18 ವರ್ಷ ಇದ್ದಾಗ ಇದನ್ನು ಶುರು ಮಾಡಿದೆ. ಆಗ ನೋಡಲಿಕ್ಕೆ ಚಿಕ್ಕ ಹುಡುಗನ ಥರ ಕಾಣಿಸ್ತಿದ್ದಿದ್ದೇ ನನಗೆ ಅಡ್ವಾಂಟೇಜ್ ಆಗಿತ್ತು. ನಾನು ವಿಡಿಯೋ ಮಾಡುತ್ತಿದ್ದೆನಾ, ಇಲ್ಲ ಮೊಬೈಲ್​ಫೋನ್​ನಲ್ಲಿ ಆಟ ಆಡುತ್ತಿದ್ದೆನಾ ಅಂತ ಹಲವರಿಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ನನ್ನನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ, ಅದೇ ನನಗೆ ಅಡ್ವಾಂಟೇಜ್ ಆಯ್ತು. ಅಫ್ಘಾನಿಸ್ತಾನದಲ್ಲೂ ಹಾಗೇ ಆಯ್ತು, ಅವರಿಗೆ ಗೋ ಪ್ರೊ ಕ್ಯಾಮರಾ ಗೊತ್ತಿರಲಿಲ್ಲ, ಹೀಗಾಗಿ ವಿಡಿಯೋ ಮಾಡ್ಕೊಂಡು ಆಮೇಲೆ ಅಪ್ಲೋಡ್ ಮಾಡಿದೆ ಎಂದರು ಗಗನ್.

    ಜನರೇ ಅದನ್ನು ತೋರಿಸು ಇದನ್ನು ತೋರಿಸು ಅಂತ ಕೇಳುತ್ತಿದ್ದರು, ನನಗೂ ಗೊತ್ತಿಲ್ಲದ ಜಾಗ ಅವರು ಹೇಳುತ್ತಿದ್ದರು, ಅದನ್ನೆಲ್ಲ ತೋರಿಸ್ತ ತೋರಿಸ್ತ ನನಗೇ ಗೊತ್ತಿಲ್ಲದೆ ಇಷ್ಟು ದೂರ ಬಂದೆ. ಜನರು ಏನು ನಿರೀಕ್ಷೆ ಮಾಡುತ್ತಿದ್ದರೋ ಅದನ್ನು ತೋರಿಸುತ್ತ ಬಂದೆ. ಈಗಲೂ ಅಷ್ಟೇ.. ಎಷ್ಟು ದಿನ ಇದರಲ್ಲೇ ಮುಂದುವರಿಯುತ್ತೇನೋ ಗೊತ್ತಿಲ್ಲ ಎನ್ನುತ್ತಾರೆ ಡಾ.ಬ್ರೋ.

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts