More

    ಗ್ರಾಹಕರಿಬ್ಬರ ಖಾತೆಯಿಂದಲೇ ಕೋಟಿಗಟ್ಟಲೆ ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡ ಬ್ಯಾಂಕ್ ಅಧಿಕಾರಿ!

    ನವದೆಹಲಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದನ್ನು ನೆನಪಿಸುವಂಥ ಪ್ರಕರಣವಿದು. ಇಲ್ಲಿ ಬ್ಯಾಂಕ್ ಅಧಿಕಾರಿಯೇ ಗ್ರಾಹಕರ ಖಾತೆಯಿಂದ ಕೋಟಿಗಟ್ಟಲೆ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು ಬಂಧಿತನಾಗಿದ್ದಾನೆ.

    ಆರ್​ಬಿಎಲ್​ ಬ್ಯಾಂಕ್​ನ ಮಾಜಿ ಸಹಾಯಕ ಉಪಾಧ್ಯಕ್ಷ ನಾಗೇಂದ್ರ ಕುಮಾರ್ ಎಂಬಾತನೇ ಆರೋಪಿ. ಈತ ಬ್ಯಾಂಕ್​ನ ಇಬ್ಬರು ಗ್ರಾಹಕರ ಖಾತೆಯಿಂದ ಒಟ್ಟು 19.8 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. 2020ರ ಆಗಸ್ಟ್​​ನಲ್ಲಿ ಈತ ಈ ಅಪರಾಧ ಎಸಗಿದ್ದ.

    ದೆಹಲಿಯ ವಸಂತಕುಂಜ ಪ್ರದೇಶದಲ್ಲಿ ಆರ್​ಬಿಎಲ್​ ಬ್ಯಾಂಕ್​ನ ಸಹಾಯಕ ಉಪಾಧ್ಯಕ್ಷನಾಗಿದ್ದ ಈತನನ್ನು ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
    ಮೆಸರ್ಸ್​ ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಜುಬಿಲೆಂಟ್ ಅಗ್ರಿ ಆ್ಯಂಡ್ ಕನ್ಸ್ಯೂಮರ್ ಪ್ರಾಡಕ್ಟ್ಸ್​ ಲಿಮಿಟೆಡ್ ಕಂಪನಿಗಳ ಖಾತೆಯ ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ 2020ರ ಆ.7ರಂದು ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ಸಲ್ಲಿಕೆಯಾಗಿತ್ತು.

    ಈ ಮೇರೆಗೆ ತನಿಖೆ ನಡೆಸಿದಾಗ ನಾಗೇಂದ್ರ ಕುಮಾರ್ ಈ ಎರಡು ಖಾತೆಗಳಿಂದ ಐಸಿಐಸಿಐ ಮತ್ತು ಎಚ್​​ಡಿಎಫ್​ಸಿ ಬ್ಯಾಂಕ್​ಗಳಲ್ಲಿರುವ ತನ್ನ ಖಾತೆಗಳಿಗೆ 19.8 ಕೋಟಿ ರೂ. ವರ್ಗಾಯಿಸಲು ಯತ್ನಿಸಿರುವುದು ಕಂಡುಬಂದಿತ್ತು.

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts