More

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ನವದೆಹಲಿ: ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಅತಿಮುಖ್ಯವಾದವುಗಳಲ್ಲಿ ನಿದ್ರೆಯೂ ಒಂದು. ಮನುಷ್ಯ ಹೇಗೆ ಸುದೀರ್ಘ ಅವಧಿಗೆ ಊಟ-ತಿಂಡಿ ಬಿಟ್ಟಿರುವುದು ಸಾಧ್ಯವಿಲ್ಲವೋ, ಹಾಗೆ ನಿದ್ರೆಯನ್ನು ಕೂಡ ಬಿಟ್ಟಿರಲು ಅಸಾಧ್ಯ. ಮಲಗಿದ ತಕ್ಷಣ ನಿದ್ರೆ ಆವರಿಸಿಬಿಡುವಂಥವರು ಇದ್ದಂತೆ, ಹೇಗೆ ಮಲಗಿದರೂ ನಿದ್ರೆ ಬರದೆ ಕನವರಿಸುವಂಥವರೂ ಇದ್ದಾರೆ.

    ಜಗತ್ತಿನಲ್ಲಿ ನಿದ್ರಾಹೀನತೆ ಕೂಡ ಹೆಚ್ಚಾಗಿ ಕಾಡುವಂಥ ಸಂಗತಿಯೇ. ಮಲಗುವ ವಿಧಾನ-ವಾತಾವರಣ, ನಿದ್ರಿಸುವ ಮುನ್ನ ಇರುವ ಮನೋಸ್ಥಿತಿ ಎಲ್ಲವೂ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಿರುವಾಗ ಏನೂ ಧರಿಸದೆ ಮಲಗುವುದರಿಂದ ಏನೆಲ್ಲ ಪ್ರಯೋಜನಗಳು ಇವೆ ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

    ನ್ಯಾಷನಲ್​ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿರುವ ಅಧ್ಯಯನದಲ್ಲಿ ನಿದ್ರೆಯ ಕುರಿತು ಸ್ವಾರಸ್ಯಕರ ಸಂಗತಿಯೊಂದು ಬಹಿರಂಗವಾಗಿದೆ. ಏನನ್ನೂ ಧರಿಸದೆ ಅರ್ಥಾತ್ ಬೆತ್ತಲಾಗಿ ಮಲಗುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ. ನಿದ್ರೆಯ ಗುಣಮಟ್ಟ ಉಷ್ಣಾಂಶದ ಮೇಲೂ ಅವಲಂಬಿಸಿರುವುದರಿಂದ ಈ ಸಂದರ್ಭದಲ್ಲಿ ಮಲಗುವ ಕೋಣೆಯಲ್ಲಿನ ತಾಪಮಾನ 15ರಿಂದ 19 ಡಿ.ಸೆ. ಇರಬೇಕು ಎಂದೂ ಈ ಅಧ್ಯಯನದಲ್ಲಿ ಹೇಳಲಾಗಿದೆ. ಈ ತಾಪಮಾನದಲ್ಲಿರುವ ಮಲಗುವ ಕೋಣೆಯಲ್ಲಿ ಪೈಜಾಮಾ ಇಲ್ಲದೆ ಅಥವಾ ಯಾವುದೇ ಬಟ್ಟೆ ಧರಿಸದೆ ಮಲಗುವುದು ಅತ್ಯುತ್ತಮ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.

    ಬಟ್ಟೆ ಧರಿಸದೆ ಮಲಗುವುದು ನಿದ್ರೆಯ ಗುಣಮಟ್ಟ ವೃದ್ಧಿಸುವುದಷ್ಟೇ ಅಲ್ಲದೆ, ತ್ವಚೆಯ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಮಾತ್ರವಲ್ಲ, ಈ ರೀತಿಯ ಮಲಗುವಿಕೆಯಿಂದ ತ್ವಚೆಯಲ್ಲಿನ ಸಣ್ಣಪುಟ್ಟ ಗಾಯಗಳೂ ಬೇಗ ಗುಣವಾಗುತ್ತದೆ. ಬೆತ್ತಲಾಗಿ ಮಲಗುವುದರಿಂದ ಆತಂಕ ಹಾಗೂ ಒತ್ತಡದ ಮನಸ್ಥಿತಿ ದೂರವಾಗುತ್ತದೆ. ಪರಿಣಾಮವಾಗಿ ಉತ್ತಮ ನಿದ್ರೆ ಬರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

    ಬಟ್ಟೆ ಧರಿಸದೆ ಮಲಗುವುದು ದಾಂಪತ್ಯ ಜೀವನವನ್ನೂ ಉತ್ತಮಗೊಳಿಸುತ್ತದೆ. ಪತಿ-ಪತ್ನಿಯ ನಡುವೆ ತ್ವಚೆ ನೇರ ಸಂಪರ್ಕಕ್ಕೆ ಬರುವುರದರಿಂದ ದಂಪತಿಯ ಮಧ್ಯೆ ಪರಿಣಾಮ ಬೀರುವಂಥ ಆಕ್ಸಿಟೋಸಿನ್ ಸ್ರವಿಕೆ ಕೂಡ ಉದ್ದೀಪನಗೊಳ್ಳುತ್ತದೆ ಎಂದು ಈ ಅಧ್ಯಯನ ತಿಳಿಸಿದೆ. ಅಂದಹಾಗೆ ನ್ಯಾಷನಲ್​ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ಈ ಅಧ್ಯಯನವನ್ನು 2012ರಲ್ಲೇ ನಡೆಸಿತ್ತು.

    ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts