More

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    ಬೆಂಗಳೂರು: ಮನೆ ಕೆಲಸದಾಕೆಯೊಬ್ಬಳು ಆರು ತಿಂಗಳಿನಿಂದ ಒಂದೊಂದಾಗಿ ಆಭರಣ ಕಳವು ಮಾಡಿದ್ದಲ್ಲದೆ, ಏನೂ ಗೊತ್ತೇ ಇಲ್ಲ ಎಂಬಂತೆ ವರ್ತಿಸಿ, ಅನುಮಾನವೇ ಬರದಂತೆ ಕೆಲಸ ಕೂಡ ಮುಂದುವರಿಸಿದ್ದಳು. ಕೊನೆಗೂ ಪೊಲೀಸರು ಈ ಪ್ರಕರಣವನ್ನು ಭೇದಿಸಿ, ಚಾಲಾಕಿ ಕಳ್ಳಿಯನ್ನು ಬಂಧಿಸಿದ್ದಾರೆ.

    ಕೆಲಸ ಮಾಡುತ್ತಿದ್ದ ಮನೆಯಲ್ಲೇ 6 ತಿಂಗಳ ಕಾಲ ಒಂದೊಂದೇ ಚಿನ್ನಾಭರಣ ಕಳವು ಮಾಡಿದ್ದ ಕಳ್ಳಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೆಂಪಾಪುರ ನಿವಾಸಿ ಮೋನಿಕಾ (30) ಬಂಧಿತ ಆರೋಪಿ. 2.3 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹೆಬ್ಬಾಳ ಕೆಂಪಾಪುರದ ಸರ್ವಿಸ್ ರಸ್ತೆ ನಿವಾಸಿ ಸಂಗೀತಾ ಪೊನ್ನಪ್ಪ ಎಂಬಾಕೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಂಧ್ರಪ್ರದೇಶ ಮೂಲದ ಮೋನಿಕಾ 2022ರ ಸೆಪ್ಟೆಂಬರ್‌ನಲ್ಲಿ ಸಂಗೀತಾ ಪೊನ್ನಪ್ಪ ಎಂಬುವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಸೆ.19ರಿಂದ ಜ.5ರವರೆಗೆ ಮಾಲಕಿ ಮನೆಯಲ್ಲಿದ್ದ ಚಿನ್ನದ ಸಾಯಿಬಾಬಾ, ಗಣಪತಿ ಪೆಂಡೆಂಟ್, ವಜ್ರದ ಪೆಂಡೆಂಟ್ ಸೇರಿದಂತೆ 40 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಅನುಮಾನ ಬಾರದಂತೆ ಕೆಲಸ ಕೂಡ ಮುಂದುವರಿಸಿದ್ದಳು.

    ಮಾಲಕಿ ಸಂಗೀತಾ ಪೊನ್ನಪ್ಪ, ಮನೆಯಲ್ಲಿ ಒಂದೊಂದೇ ಆಭರಣ ನಾಪತ್ತೆ ಆಗುತ್ತಿರುವ ಬಗ್ಗೆ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಮನೆಗೆಲಸದಾಕೆ ಮೋನಿಕಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts