More

    ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲೂ ಅನುರಣಿಸಿತು ಮುಸ್ಲಿಂ ವಿಚಾರ; ಹರಿಪ್ರಸಾದ್ ಆರೋಪಕ್ಕೆ ವೇದಿಕೆಯಲ್ಲೇ ಜೋಶಿ ತಿರುಗೇಟು

    ಹಾವೇರಿ: ತಯಾರಿಯ ಆರಂಭದಿಂದಲೂ ವಿವಾದದಲ್ಲೇ ತೇಲಾಡಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ವಿವಾದಾತ್ಮಕ ಅಂಶ ಪ್ರಸ್ತಾಪವಾಗಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ವೇದಿಕೆಯಲ್ಲೇ ತಿರುಗೇಟು ನೀಡಿದ್ದಾರೆ.

    ಈ ಸಲದ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಸ್ಲಿಂ ಸಾಹಿತಿಗಳನ್ನು ದೂರವಿರಿಸಿ ರಾಜಕೀಯ ಮಾಡಿದೆ ಎಂದು ಬಿ.ಕೆ. ಹರಿಪ್ರಸಾದ್ ದೂರಿದ್ದ ಹಿನ್ನೆಲೆಯಲ್ಲಿ ಕಸಾಪ ಅಧ್ಯಕ್ಷ ಜೋಶಿ ಅದಕ್ಕೆ ಇಂದು ಸಮಾರೋಪ ಸಮಾರಂಭದ ವೇದಿಕೆಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

    ಹರಿಪ್ರಸಾದ್ ನನ್ನ ವಿರುದ್ಧ ನೇರ ಆರೋಪ‌ ಮಾಡಿದ್ದಾರೆ, ಉತ್ತರ ಕೊಡದಿದ್ದಲ್ಲಿ ಒಪ್ಪಿಕೊಂಡಂತೆ ಆಗುತ್ತದೆ, ಮುಸ್ಲಿಂ ಸಾಹಿತಿಗಳನ್ನು ದೂರ ಇಟ್ಟಿದ್ದಾರೆಂದು ಹೇಳಿದ್ದಾರೆ, ನಾನು ಸಂತ ಶಿಶುನಾಳ‌ ಷರೀಫರ ನಾಡಿನಲ್ಲಿ ನಿಂತಿದ್ದೇನೆ, ಷರೀಫರ ನಾಡಿನಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡುತ್ತೇವಾ? ಎಂದು ಪ್ರಶ್ನಿಸಿರುವ ಜೋಶಿ, ಕನಕದಾಸರ ನಾಡಿನಲ್ಲಿ ಹುಟ್ಟಿದ ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ಈ ಸಲದ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರಿಗೆ ಅವಕಾಶ ಕೊಟ್ಟಿದ್ದೇವೆ, ಅದನ್ನು ದಾಖಲೆ ಸಮೇತ ನಾನು ಹೇಳುವೆ. ಹನ್ನೊಂದು ಜನ ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ, ಮುಸ್ಲಿಂ ಸಾಹಿತಿಗಳಿಗೆ ಸನ್ಮಾನವನ್ನೂ ಮಾಡಲಾಗಿದೆ. ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ ಹೊರತು ಧರ್ಮ-ಜಾತಿ ಆಧಾರಿತ ಸಮ್ಮೇಳನ ಮಾಡುತ್ತಿಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ, ನಾವು ಇಲ್ಲಿ ಮೊದಲು ಕನ್ನಡದವರಾಗಿ ಸಮ್ಮೇಳನ ಮಾಡಿದ್ದೇವೆ ಎಂದು ಜೋಶಿ ತಿರುಗೇಟು ನೀಡಿದ್ದಾರೆ.

    ಜ್ಞಾನಯೋಗಿಯ ಬಳಿ ಪಾರಿವಾಳ; ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ಬಿಟ್ಟು ಹೋಗದ ಪಕ್ಷಿ!

    ಡಾ.ಬ್ರೋ@ವಿಜಯವಾಣಿ: ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಗಳು..

    ಎಷ್ಟು ದೇಶ ಸುತ್ತಿದರೂ ನಮ್ಮೂರೇ ಮೇಲು!; ಡಾ.ಬ್ರೋ ಜತೆ ವಿಜಯವಾಣಿ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts