More

    ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ಥರ ಸಾವಿಗೀಡಾದ ಅವಳಿ ಸಹೋದರರು!; 900 ಕಿ.ಮೀ. ದೂರದಲ್ಲಿ ನಡೆಯಿತು ವಿಚಿತ್ರ ಘಟನೆ!

    ಬರ್ಮರ್​: ಅವಳಿ-ಜವಳಿ ಮಕ್ಕಳೆಂದರೆ ಒಟ್ಟೊಟ್ಟಿಗೆ ಜನನ, ರೂಪದಲ್ಲಿ ಹೋಲಿಕೆ ಸಹಜ. ಆದರೆ ಇಲ್ಲೊಂದು ಕಡೆ ಅವಳಿ-ಜವಳಿ ಮಕ್ಕಳ ಸಾವೂ ಒಟ್ಟೊಟ್ಟಿಗೆ ಸಂಭವಿಸಿದ್ದಷ್ಟೇ ಅಲ್ಲ, ಇಬ್ಬರ ಸಾವಲ್ಲಿ ಹೋಲಿಕೆಯೂ ಕಂಡುಬಂದಿದೆ. ಅದರಲ್ಲೂ ವಿಚಿತ್ರ ಎಂದರೆ ಸಾಮ್ಯತೆ ಇರುವ ಈ ಎರಡೂ ಸಾವು 900 ಕಿ.ಮೀ. ದೂರದಲ್ಲಿ ಸಂಭವಿಸಿದೆ.

    ರಾಜಸ್ಥಾನದಲ್ಲಿ ಇಂಥದ್ದೊಂದು ವಿಚಿತ್ರ ಸಂಭವಿಸಿದೆ. 26 ವರ್ಷದ ಅವಳಿ-ಜವಳಿ ಸಹೋದರರು 900 ಕಿ.ಮೀ. ದೂರದಲ್ಲಿದ್ದರೂ ಒಂದೇ ದಿನ, ಕೆಲವೇ ಗಂಟೆಗಳ ಅಂತರದಲ್ಲಿ ಸಾವಿಗೀಡಾಗಿದ್ದಾರೆ. ಒಬ್ಬರು ಸೂರತ್​ನಲ್ಲಿ, ಇನ್ನೊಬ್ಬರು ಬರ್ಮರ್​ನಲ್ಲಿ ಸಾವಿಗೀಡಾಗಿದ್ದಾರೆ. ಇಬ್ಬರ ಸಾವಿನಲ್ಲಿನ ಸಾಮ್ಯತೆಗೆ ಕುಟುಂಬಸ್ಥರೂ ಅಚ್ಚರಿಗೀಡಾಗಿದ್ದಾರೆ.

    ಒಬ್ಬ ಸಹೋದರ ಮನೆಯ ಟೆರೇಸ್​ನಿಂದ ‘ಜಾರಿ ಬಿದ್ದು’ ಮೃತಪಟ್ಟರೆ, ಇನ್ನೊಬ್ಬ ನೀರಿನ ತೊಟ್ಟಿಯೊಳಕ್ಕೆ ‘ಜಾರಿ ಬಿದ್ದು’ ಮೃತಪಟ್ಟಿದ್ದಾನೆ. ಹೀಗೆ ಸಾವಿಗೀಡಾದ ಅವಳಿ ಸಹೋದರರ ಹೆಸರು ಸೋಹನ್ ಸಿಂಗ್ ಮತ್ತು ಸುಮೇರ್ ಸಿಂಗ್. ಬಳಿಕ ಇಬ್ಬರನ್ನೂ ಅವರ ತವರು ಗ್ರಾಮವಾದ ಸಾರ್ನೊ ಕ ತಾಲಾದಲ್ಲಿ ಒಟ್ಟಿಗೇ ಅಂತ್ಯಸಂಸ್ಕಾರ ನಡೆಸಲಾಗಿದೆ. ಸುಮೇರ್​ ಗುಜರಾತ್​​ನ ಟೆಕ್ಸ್​ಟೈಲ್​ ಸಿಟಿಯಲ್ಲಿ ಉದ್ಯೋಗದಲ್ಲಿದ್ದರೆ, ಸೋಹನ್ ಜೈಪುರದಲ್ಲಿ ಗ್ರೇಡ್ 2 ಶಿಕ್ಷಕರ ನೇಮಕಾತಿ ಪರೀಕ್ಷೆಗೆ ತೆರಳಿದ್ದ.

    ಕಿರಿಯವ ಸುಮೇರ್ ಬುಧವಾರ ರಾತ್ರಿ ಫೋನ್​ನಲ್ಲಿ ಮಾತನಾಡುತ್ತಿರುವಾಗಲೇ ಜಾರಿ ಬಿದ್ದಿದ್ದರೆ, ಹಿರಿಯವ ಸೋಹನ್ ಗುರುವಾರ ಬೆಳಗಿನ ಜಾವ ನೀರಿನ ತೊಟ್ಟಿಗೆ ಬಿದ್ದು ಸಾವಿಗೀಡಾಗಿದ್ದ. ಮನೆಯಿಂದ ನೂರು ಅಡಿ ದೂರದಲ್ಲಿನ ಟ್ಯಾಂಕ್​ನಿಂದ ನೀರು ತರಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

    ಬಟ್ಟೆ ಧರಿಸದೆ ಮಲಗುವುದರಿಂದ ಏನು ಪ್ರಯೋಜನ?; ಇಲ್ಲಿದೆ ಅಧ್ಯಯನದ ಅಂಶಗಳು..

    ಈ ವಿಷಯದಲ್ಲಂತೂ ಡಾ.ಬ್ರೋ ‘ಸೂಪರ್ ಸ್ಟಾರ್​’; ‘ಎಷ್ಟು ಸಾವಿರ ಕೊಟ್ರೂ ಅದನ್ನು ಮಾತ್ರ ಮಾಡಲ್ಲ’ ಅಂತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts