

ಕಾಸರಗೋಡು: ಕುಂಬಳೆ ಪೇಟೆಯಲ್ಲಿ ರಾತ್ರಿ ನಿಲ್ಲಿಸಿದ್ದ ಬಸ್‌ಗಳಿಂದ ಡೀಸೆಲ್ ಕಳ್ಳತನ ಮಾಡಲಾಗಿದೆ. ಬದಿಯಡ್ಕ ರಸ್ತೆಯಲ್ಲಿನ ಪೆಟ್ರೊಲ್ ಪಂಪ್ ಒಂದರ ಎದುರು ನಿಲ್ಲಿಸಲಾಗಿದ್ದ ಎರಡು ಬಸ್‌ಗಳಿಂದ ಸುಮಾರು 285 ಲೀ. ಡೀಸೆಲ್ ಕಳವುಗೈಯಲಾಗಿದೆ. ಒಂದು ಬಸ್‌ನಿಂದ 135 ಲೀ. ಹಾಗೂ ಇನ್ನೊಂದರಿಂದ 150ಲೀ. ಡೀಸೆಲ್ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಇಂಧನ ತುಂಬಿಸಿ ಬೆಳಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದಾಗ ಕಳವು ಬೆಳಕಿಗೆ ಬಂದಿದೆ. ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಕಾರು ಆಗಮಿಸಿದ ದೃಶ್ಯ ಸೆರೆಯಾಗಿದೆ.