

ಕಾಸರಗೋಡು: ಪುತ್ರನ ವಿವಾಹ ಸಮಾರಂಭಕ್ಕೆ ಚಪ್ಪರದ ಕೆಲಸ ನಡೆಸುತ್ತಿರುವ ಮಧ್ಯೆ ತಂದೆ ಕುಸಿದು ಬಿದ್ದು ಮೃತಪಟ್ಟ ಘಟನೆ ಕುಂಬಳೆ ಸನಿಹದ ಬೆದ್ರಡ್ಕದಲ್ಲಿ ನಡೆದಿದೆ. ಬೆದ್ರಡ್ಕದ ರಾಜೀವ್ ದಶಲಕ್ಷ ಕಾಲನಿ ಹೌಸ್ನ ಉಡುವ ಮಹಮ್ಮದ್ಕುಞಿ(62)ಮೃತಪಟ್ಟವರು. ಅವರ ಪುತ್ರನ ವಿವಾಹ ಜೂ.7ರಂದು ಮನೆಯಲ್ಲಿ ನಡೆಸಲುದ್ದೇಶಿಸಿದ್ದು, ಇದಕ್ಕಾಗಿ ಸಿದ್ಧತಾ ಕಾರ್ಯ ನಡೆಸುವ ಮಧ್ಯೆ ಈ ಘಟನೆ ನಡೆದಿದೆ. ಕುಸಿದು ಬಿದ್ದ ಮಹಮ್ಮದ್ಕುಞಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.