ಸೀಲಿಂಗ್‌ಫ್ಯಾನ್ ಕಳಚಿಬಿದ್ದು ಮನೆ ಮಾಲೀಕ ಮೃತ್ಯು

fan
Published on

ಕಾಸರಗೋಡು: ಪಯ್ಯನ್ನೂರು ಎಟ್ಟಿಕುಳಂ ಎಂಬಲ್ಲಿ ಮಲಗುವ ಕೊಠಡಿಯ ಸೀಲಿಂಗ್ ಪ್ಯಾನ್ ಮೇಲ್ಚಾವಣಿಯ ಸಿಮೆಂಟ್ ಸ್ಲ್ಯಾಬ್ ಸಹಿತ ಕಳಚಿಬಿದ್ದು ಮನೆ ಮಾಲೀಕ ಮೃತಪಟ್ಟಿದ್ದಾರೆ. ಎಟ್ಟಿಕುಳಂ ಅಂಬಲಪ್ಪಾರ ನಿವಾಸಿ ಎ.ಕೆ.ಮಹಮ್ಮದ್ ಶಮೀರ್(48)ಮೃತರು. ಪತ್ನಿ ಹಾಗೂ ಮಕ್ಕಳು ಶಾಲಾ ಸಮವಸ್ತ್ರ ಖರೀದಿಸಲು ತೆರಳಿದ್ದ ಸಂದರ್ಭ ಫ್ಯಾನ್ ಕಳಚಿಬಿತ್ತು. ಮನೆಯಲ್ಲಿ ಕೆಲಸಕ್ಕಿದ್ದವರು ಧಾವಿಸಿ ಮಹಮ್ಮದ್ ಶಮೀರ್ ಅವರನ್ನು ಉಪಚರಿಸಿದರು. ಪತ್ನಿ ಮತ್ತು ಮಕ್ಕಳು ವಾಪಸಾದಾಗಲೂ, ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಶಮೀರ್ ತಿಳಿಸಿದ್ದರು. ಕೆಲ ಹೊತ್ತಿನಲ್ಲಿ ನೋವು ಹೆಚ್ಚಾಗಿ, ತಕ್ಷಣಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net