ಹಣೆಗೆ ಬಿಂದಿ ಇಟ್ಟುಕೊಳ್ಳುವುದರಿಂದ ಇಷ್ಟೆಲ್ಲ ಆರೋಗ್ಯ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ... Bindi

Bindi
Published on

Bindi: ಇಂದಿನ ದಿನಗಳಲ್ಲಿ ಎಲ್ಲರೂ ಆಧುನಿಕ ಪದ್ಧತಿಗೆ ಒಗ್ಗಿಕೊಂಡಿದ್ದು, ತಲಾತಲಾಂತರದಿಂದ ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ಬದಿಗಿಡಲಾಗುತ್ತಿದೆ. ಸಂಪ್ರದಾಯಗಳನ್ನು ಅನುಸರಿಸುವಂತೆ ಹಿರಿಯರು ಹೇಳಿದರು ಕೂಡ ದಿನಗಳು ಬದಲಾದಂತೆ ಜನರಲ್ಲಿಯೂ ಬಹಳಷ್ಟು ಬದಲಾವಣೆಯಾಗುತ್ತಿದೆ. ಹಣೆಗೆ ಕುಂಕುಮ ಅಥವಾ ಬಿಂದಿ ಧರಿಸುವುದು ನಮ್ಮ ಸಂಪ್ರದಾಯ. ಆದರೆ, ಅದನ್ನು ಇಂದು ಅನೇಕರು ನಿರ್ಲಕ್ಷಿಸುತ್ತಿದ್ದಾರೆ. ಆದರೆ, ಮೇಕಪ್ ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ. ಆದರೆ, ಬಿಂದಿ ಧರಿಸುವುದು ಕೇವಲ ಧಾರ್ಮಿಕ ಕಾರಣಗಳಿಗಾಗಿ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಹಿಂದು ಸನಾತನ ಧರ್ಮದಲ್ಲಿ ಹಣೆಯ ಮೇಲೆ ಇಡುವ ಬೊಟ್ಟು ಅಥವಾ ಬಿಂದಿಗೆ ಹೆಚ್ಚಿನ ಮಹತ್ವವಿದೆ. ಬಿಂದಿ ಹಾಕುವುದರ ಹಿಂದಿರೋ ವೈಜ್ಞಾನಿಕ ಕಾರಣಗಳೇನು? ಬಿಂದಿಯ ಮಹತ್ವವೇನು ಎಂಬುದನ್ನು ನೋಡೋಣ.

ಎರಡು ಕಣ್ಣುಗಳ ಹುಬ್ಬುಗಳ ನಡುವೆ ಬಿಂದಿಯನ್ನು ಇಡಬೇಕು. ಎರಡು ಕಣ್ಣುಗಳ ನಡುವಿನ ಅಂತರವನ್ನು ಆಜ್ಞಾ ಚಕ್ರ ಎಂದು ಕರೆಯಲಾಗುತ್ತದೆ. ಇದು ದೇಹದಲ್ಲಿನ ಆರನೇ ಅತ್ಯಂತ ಶಕ್ತಿಶಾಲಿ ಚಕ್ರವಾಗಿದೆ. ಇದು ತಲೆ, ಮೆದುಳು, ಕಣ್ಣುಗಳು, ಪೀನಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಯನ್ನು ಒಳಗೊಂಡಿದೆ.

ಬಿಂದಿ ಇಡುವಾಗ ಮಹಿಳೆಯರು ಸಮಯವನ್ನು ತೆಗೆದುಕೊಳ್ಳುತ್ತಾರೆ. ಬಿಂದಿಯನ್ನು ಹಣೆಯಲ್ಲಿ ಸರಿಯಾದ ಜಾಗದಲ್ಲಿ ಒತ್ತಿ ಇಡುತ್ತಾರೆ. ಈ ರೀತಿ ಒತ್ತಿ ಇಡುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಮೆದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಇದು ದೇಹವನ್ನು ತಂಪಾಗಿಡಲು ಸಹ ಸಹಾಯ ಮಾಡುತ್ತದೆ. ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ನಿಮ್ಮ ಚರ್ಮವನ್ನು ಯೌವನವಾಗಿರಿಸುತ್ತದೆ. ಶ್ರವಣವನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯನ್ನು ತಡೆಯುತ್ತದೆ.

ಇನ್ನು ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ಇದನ್ನು ಧರಿಸಬಹುದು. ಮಹಿಳೆಯರು ಬಿಂದಿ ಧರಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ ಮತ್ತು ಜ್ಞಾಪಕಶಕ್ತಿ ಹೆಚ್ಚುತ್ತದೆ. ಅಲ್ಲದೆ, ಆಲೋಚನಾ ಶಕ್ತಿಯನ್ನೂ ಹೆಚ್ಚಿಸಬಹುದು. ಅಲ್ಲದೆ, ಬಿಂದಿ ಧರಿಸಿದ ಜನರು ಇತರರಿಗೆ ಶುದ್ಧರಾಗಿ ಕಾಣುತ್ತಾರೆ. ಹೀಗಾಗಿ ಇತರರಿಂದ ಗೌರವವನ್ನು ಸಹ ಪಡೆಯುತ್ತಾರೆ. ಹೀಗಾಗಿ ಬಿಂದಿ ಹಾಕಿಕೊಳ್ಳುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net