More

    ಸಾವಿರಾರು ಕೋಟಿ ಗಳಿಕೆಯ ಸ್ಟಾರ್​​​ ನಟ ಶಾರುಖ್ ಮೊದಲ ಪೇ ಚೆಕ್​​ ಕೇವಲ 50 ರೂ., ಸಂಗೀತ ಕಚೇರಿಯಲ್ಲಿ ಸಿಕ್ಕಿದ್ದ ಮೊದಲ ಸಂಭಾವನೆ…!

    ಬಾಲಿವುಡ್​​​ ಬಾದ್​​​ ಷಾ ಶಾರುಖ್​​ ಖಾನ್​​​ ದಶಕಗಳಿಂದ ಬಾಲಿವುಡ್​​​ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪನ್ನ ಮೂಡಿಸಿದವರು. ಇದೀಗ ಬಾದ್​​​ ಷಾ ಬಾಲಿವುಡ್​​ ಇಂಡಸ್ಟ್ರಿಯಲ್ಲಿ ಸಾವಿರಾರು ಕೋಟಿಯ ಸರದಾರನಾಗಿದ್ದು, ಸಾಕಷ್ಟು ಮಂದಿಗೆ ಶಾರುಖ್​​​ ಮೊದಲ ಸಂಭಾವನೆಯ ಕುರಿತಂತೆ ಪ್ರಶ್ನೆಗಳು ಇದ್ದೇ ಇರುತ್ತೆ. ಅಂತೆಯೇ ಇದೀಗ ಶಾರುಖ್​​ ಮೊದಲ ಸಂಭಾವನೆ ಕೇವಲ 50 ರೂ. ಅನ್ನೋ ವಿಚಾರವನ್ನ ಸಂದರ್ಶನವೊಂದರಲ್ಲಿ ಶಾರುಖ್​​ ಹಂಚಿಕೊಂಡಿದ್ದಾರೆ.


    ನಟ ಶಾರುಖ್​​​ ಖಾನ್​​​, ಮೊದಲ ಸಂಭಾವನೆ ಕೇಳಿ ಸಾಕಷ್ಟು ಮಂದಿ ಆಶ್ಚರ್ಯ ಚಕಿತರಾದ್ರೆ, ಶಾರುಖ್​​​​ ಯಾವ ಕೆಲಸಕ್ಕಾಗಿ ಈ ಪೇ ಚೆಕ್​ ಪಡೆದ್ರು ಅನ್ನೋ ಪ್ರಶ್ನೆ ಹಲವರದ್ದು. ಶಾರುಖ್​​​ ಪಿಟಿಐ (PTI)ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.


    ಪಿಟಿಐಗೆ ನೀಡಿದ ಹಳೆಯ ಸಂದರ್ಶನದಲ್ಲಿ, ಶಾರುಖ್ ಖಾನ್ ತಮ್ಮ ವೃತ್ತಿಜೀವನದ ಆರಂಭಿಕ ಹಂತದ ಆಸಕ್ತಿದಾಯಕ ವಿಚಾರಗಳನ್ನ ಹಂಚಿಕೊಂಡಿದ್ದು, ಪಂಕಜ್ ಉದಾಸ್ ಸಂಗೀತ ಕಚೇರಿಯಲ್ಲಿ ರಂಭಿಕ ವೇತನ 50 ರೂ. ಪಡೆದ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಸದ್ಯ ಶಾರುಖ್​​ ಖಾನ್​​ ವೇತನವನ್ನ ಕೇಳಿ ಅನೇಕ ಮಂದಿ ಶಾಕ್​​ ಆಗಿದ್ದಾರೆ.


    ಪಠಾಣ್ ಮತ್ತು ಜವಾನ್‌ನಂತಹ ಬ್ಲಾಕ್‌ಬಸ್ಟರ್ ಪ್ರಾಜೆಕ್ಟ್‌ಗಳನ್ನು ನೀಡಿರುವ ಶಾರುಖ್​​ ಖಾನ್​ ಇದೀಗ, ಡಂಕಿ ಚಿತ್ರದ ಶೂಟಿಂಗ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಅವರು ತಮ್ಮ ಮುಂಬರುವ ಚಿತ್ರ ಡಂಕಿಯೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಆಕರ್ಷಿಸಲು ರೆಡಿಯಾಗಿದ್ದಾರೆ.


    ಇನ್ನು ಡಂಕಿ ಚಿತ್ರದಲ್ಲಿ ತಾಪ್ಸೀ ಪನ್ನು, ವಿಕ್ಕಿ ಕೌಶಲ್ ಮತ್ತು ಬೊಮನ್ ಇರಾನಿಯಂತಹ ತಾರಾಗಣವೂ ಇದೆ. ಡಿಸೆಂಬರ್ 22 ರಂದು ಡಂಕಿ ಚಿತ್ರ ಮಂದಿರಗಳಲ್ಲಿ ರಿಲೀಸ್​​​ ಆಗಲಿದ್ದು, ಸಲಾರ್​​​ ಸಿನಿಮಾ ಸಹ ಡಿಸೆಂಬರ್​​ ತಿಂಗಳಿನಲ್ಲೇ ಬಿಡುಗಡೆಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts