ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನಾ, ಪುತ್ರಿ ಅರ್ಷಿ ವಿರುದ್ಧ ಕೊಲೆ ಯತ್ನ ದೂರು ದಾಖಲು! Hasin Jahan

Mohammed Shami
Published on

Hasin Jahan : ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನಾ ಜಹಾನ್​ ಮತ್ತು ಅವರ ಮೊದಲ ಪತಿಯ ಮಗಳು ಅರ್ಷಿ ಜಹಾನ್​ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೂರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಲಿಯಾ ಖತುನ್ ಎಂಬ ಮಹಿಳೆ ದೂರು ದಾಖಲಿಸಿದ್ದು, ವಿವಾದಿತ ಜಮೀನಿನ ವಿಚಾರದಲ್ಲಿ ಹಸಿನಾ ಮತ್ತು ಅರ್ಷಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಸಿನಾ ಮತ್ತು ಅರ್ಷಿ ವಿರುದ್ಧ ಐಪಿಸಿ ಸೆಕ್ಷನ್ 126(2), 115(2), 117(2), 109, 351(3), 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಸಿನಾ ಮತ್ತು ಅರ್ಷಿ, ದಾಲಿಯಾ ಖತೂನ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಪೂರ್ಣ ವಿವರಗಳಿಗೆ ಹೋಗುವುದಾದರೆ, ಹಸಿನಾ ಜಹಾನ್​ ಮತ್ತು ಅವರ ಮಗಳು ಅರ್ಷಿ ಜಹಾನ್​ ಪಶ್ಚಿಮ ಬಂಗಾಳದ ಸೂರಿ ಪಟ್ಟಣದ ವಾರ್ಡ್ ಸಂಖ್ಯೆ 5 ರಲ್ಲಿ ವಾಸಿಸುತ್ತಿದ್ದಾರೆ. ಅವರು ಇತ್ತೀಚೆಗೆ ಅದರ ಪಕ್ಕದ ಖಾಲಿ ಜಾಗದಲ್ಲಿ ಮನೆ ನಿರ್ಮಿಸಲು ಪ್ರಾರಂಭಿಸಿದರು. ಆ ನಿವೇಶನವನ್ನು ಅರ್ಷಿ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಪಕ್ಕದಲ್ಲೇ ವಾಸಿಸುವ ಡಾಲಿಯಾ ಖಾತುನ್, ಆ ಭೂಮಿ ತನ್ನದು ಎಂದು ಹೇಳಿಕೊಂಡು ಮುಂದೆ ಬಂದಿದ್ದಾರೆ.

ಅಲ್ಲದೆ, ಹಸೀನಾ ಜಹಾನ್​ ಆರಂಭಿಸಿದ್ದ ನಿರ್ಮಾಣ ಕಾರ್ಯವನ್ನು ತಡೆಯಲು ಖಾತುನ್​ ಪ್ರಯತ್ನಿಸಿದರು. ಈ ಪ್ರಕ್ರಿಯೆಯಲ್ಲಿ ಹಸೀನ್ ಮತ್ತು ಅರ್ಷಿ ಖಾತುನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಕರಣ ದಾಖಲಿಸಲಾಗಿದೆ.

ಇನ್ನು ಇದೇ ವೇಳೆ ಶಮಿ ಅವರು ಇತ್ತೀಚೆಗೆ ಕೋಲ್ಕತ ಹೈಕೋರ್ಟ್‌ನಿಂದ ವಿಚ್ಛೇದನ ಪಡೆದರು. ಹಸಿನಾಗೆ ಜೀವನಾಂಶವಾಗಿ 4 ಲಕ್ಷ ರೂ. ಪಾವತಿಸಲು ನ್ಯಾಯಾಲಯ ಆದೇಶಿಸಿದೆ. ಶಮಿ ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದ ಹೈಕೋರ್ಟ್ ಈ ತೀರ್ಪು ನೀಡಿದೆ. ಇದರಲ್ಲಿ ಹಸಿನಾ 1.5 ಲಕ್ಷ ರೂ. ಮತ್ತು ಶಮಿ ಅವರ ಮಗಳು ಐರಾ 2.5 ಲಕ್ಷ ರೂ.ಗೆ ಅರ್ಹರು ಎಂದು ನ್ಯಾಯಾಲಯ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net