ಸುದೀಪ್​ ಚಿತ್ರದಲ್ಲಿ ಚಾನ್ಸ್ ಕೇಳಿದ್ರಾ ನಟ ದರ್ಶನ್​? ಶಾಕಿಂಗ್ ಆಗಿದೆ 'ಹುಚ್ಚ' ನಿರ್ಮಾಪಕರು ಕೊಟ್ಟ ಪ್ರತಿಕ್ರಿಯೆ

ವಿಜಯವಾಣಿ - 2024-07-09T130229.214
Published on

ಬೆಂಗಳೂರು: ಕನ್ನಡ ಚಿತ್ರರಂಗ ಒಂದು ಬಣ್ಣದ ಲೋಕ. ಬೆಳ್ಳಿಪರದೆಯ ಮೇಲೆ ತಾರೆಯರ ಸಮಾಗಮ ನೋಡುವುದೇ ಒಂದು ಹಬ್ಬ. ಸಿನಿಪ್ರೇಕ್ಷಕರ ಮುಂದೆ ನನ್ನದೊಂದು ಸಿನಿಮಾ ಬರಬೇಕು, ನನ್ನನ್ನು ಅವರು ಗುರುತಿಸಬೇಕು ಎಂಬ ತವಕ ಅಂದಿನ ಕಲಾವಿದರದ್ದಾಗಿತ್ತು. ಅವಕಾಶಕ್ಕಾಗಿ ನಿರ್ದೇಶಕ, ನಿರ್ಮಾಪಕರನ್ನು ಕಾಡುತ್ತಿದ್ದ ಚಿತ್ರನಟರು ಇಂದು ದೊಡ್ಡ ಸ್ಥಾನಕ್ಕೇರಿದ್ದು, ಇಂದಿನ ಯುವ ಪ್ರತಿಭೆಗಳಿಗೆ ತಮಗೆ ಸಿಕ್ಕ ನೆರಳನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ. ಸ್ಟಾರ್​ ಪಟ್ಟ ಪಡೆದವರ ಪೈಕಿ ಜನರ ಮೆಚ್ಚುಗೆ, ಪ್ರೀತಿ, ಅಭಿಮಾನವನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿದ್ದು ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್.

20ರ ದಶಕದಲ್ಲಿ ಸಿನಿಪ್ರಿಯರನ್ನು ಸತತವಾಗಿ ತಮ್ಮ ಸಿನಿಮಾಗಳ ಮೂಲಕ ಮನರಂಜಿಸಿದ ಸ್ಟಾರ್​ ನಟರಿವರು. ಹುಚ್ಚ ಚಿತ್ರದ ಮುಖೇನ ಸ್ಯಾಂಡಲ್​ವುಡ್​ನಲ್ಲಿ ತನ್ನದೇ ಛಾಪು ಮೂಡಿಸಿದ ಸುದೀಪ್, ಅದೊಂದು ಪಾತ್ರದಲ್ಲಿ ಸಿನಿಪ್ರೇಕ್ಷಕರನ್ನು ಗಟ್ಟಿಯಾಗಿ ತಮ್ಮತ್ತ ಸೆಳೆದರು. 2001ರಲ್ಲಿ ತೆರೆಕಂಡ ಈ ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಚಿತ್ರವಾಗಿ ಹೊರಹೊಮ್ಮಿತು. ಇದೀಗ ಈ ಸೂಪರ್​ಡೂಪರ್ ಚಿತ್ರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ರಿ-ರಿಲೀಸ್ ಆಗಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಿಚ್ಚನ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ, ರೆಹಮಾನ್ ನಿರ್ಮಾಣದ ಹುಚ್ಚ ಸಿನಿಮಾವನ್ನು ಇಂದಿನ ಟೆಕ್ನಾಲಜಿ ಬಳಸಿ, ಹೊಸ ರೂಪದಲ್ಲಿ ಮರುಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಆದ್ರೆ, ಯಾವ ದಿನಾಂಕದಂದು ಚಿತ್ರ ರಿಲೀಸ್ ಆಗಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಖಚಿತ ಮಾಹಿತಿ ಲಭಿಸಲ್ಲ. ಈ ಮಧ್ಯೆ ಅಚ್ಚರಿ ಸಂಗತಿಯೊಂದು ಕೇಳಿಬಂದಿದ್ದು, ಹುಚ್ಚ ಚಿತ್ರದಲ್ಲಿ ಸುದೀಪ್ ಸ್ನೇಹಿತನ ಪಾತ್ರವನ್ನು ನಟ ದರ್ಶನ್ ಕೇಳಿದ್ದರಂತೆ. ಅಸಲಿಗೆ ಇದು ನಿಜವೇ ಎಂಬ ಪ್ರಶ್ನೆಗೆ ನಿರ್ಮಾಪಕ ರೆಹಮಾನ್ ಹೌದು ಎಂದಿದ್ದಾರೆ.

ಇದು ಸತ್ಯ. ಆಗ ತಾನೇ ಸ್ಪರ್ಶ ಮುಗಿಸಿಕೊಂಡು ಹುಚ್ಚ ಚಿತ್ರಕ್ಕೆ ಕೈಹಾಕಿದ್ದ ಸುದೀಪ್​, ತಮ್ಮ ಎರಡನೇ ಚಿತ್ರದ ಕೆಲಸದಲ್ಲಿ ತೊಡಗಿದ್ದರು. ಈ ಸಮಯದಲ್ಲಿ ದರ್ಶನ್​ಗೆ​ ಮೆಜೆಸ್ಟಿಕ್ ಸಿನಿಮಾ ಇನ್ನೂ ಸಿಕ್ಕಿರಲಿಲ್ಲ. ಆಗ ಸುದೀಪ್ ಅವರ ಹುಚ್ಚ ಚಿತ್ರದಲ್ಲಿ ಸ್ನೇಹಿತರ ಪಾತ್ರವಿತ್ತು. ಅವರ ಪೈಕಿ ಯಾವುದಾದರು ಒಂದು ಪಾತ್ರ ನಾನು ಮಾಡುತ್ತೇನೆ ಕೊಡಿಸಿ ಎಂದು ದರ್ಶನ್​ ನಿರ್ಮಾಪಕರ ಬಳಿ ಕೇಳಿದ್ದರಂತೆ. ಅದಕ್ಕೆ ಉತ್ತರಿಸಿದ ರೆಹಮಾನ್ ಅವರು, ಸೆಟ್​ಗೆ ಬಂದ ದರ್ಶನ್​ರನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. ದರ್ಶನ್​ ಲುಕ್​, ಖಡಕ್ ಎತ್ತರ ಕಂಡು ಇವರಿಗೆ ಹೀರೋ ಆಗುವ ಲಕ್ಷಣವಿದೆ ಎಂದು ಭಾವಿಸಿ, ಸ್ನೇಹಿತನ ಪಾತ್ರಕ್ಕೆ ಚಾನ್ಸ್ ಕೊಡಿಸಲು ನಿರಾಕರಿಸಿದ್ದರಂತೆ.

ಸುದೀಪ್​ ಸ್ನೇಹಿತರ ರೋಲ್​ ಅಷ್ಟು ಬೇರೂರುವ ಪಾತ್ರವಲ್ಲ. ಇದರಲ್ಲಿ ನೀವು ನಟಿಸುವುದು ಬೇಡ. ನಿಮಗೆ ಹೀರೋ ಆಗುವ ಲಕ್ಷಣವಿದೆ. ಫ್ರೆಂಡ್ಸ್​ ಪಾತ್ರವೆಲ್ಲಾ ಮಾಡುವುದು ಸರಿಯಲ್ಲ ಎಂದು ರೆಹಮಾನ್ ದರ್ಶನ್​ಗೆ ಹೇಳಿದ್ದರಂತೆ. ಇದೊಂದು ಕಾರಣದಿಂದ ಅಂದು ದರ್ಶನ್​ಗೆ ಹುಚ್ಚ ಚಿತ್ರದಲ್ಲಿ ಸುದೀಪ್ ಸ್ನೇಹಿತನ ಪಾತ್ರ ಮಿಸ್ ಆಗಿತ್ತು. ಅದಾದ ನಂತರ ನಟ ದರ್ಶನ್​ ಮೆಜೆಸ್ಟಿಕ್​ನಲ್ಲಿ ಮಾಸ್​ ಆಗಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟರಾಗಿ ಹೆಜ್ಜೆಯಿಟ್ಟವರು. ಹುಚ್ಚ ಸಿನಿಮಾ ಮತ್ತೆ ಹೊಸ ರೂಪದಲ್ಲಿ ತೆರೆಗೆ ಬರುತ್ತಿರುವ ಬೆನ್ನಲ್ಲೇ ಈ ವಿಷಯಗಳು ಮುನ್ನೆಲೆಗೆ ಬಂದಿದ್ದು, ನೆಟ್ಟಿಗರ ಕೌತುಕ ಮತ್ತಷ್ಟು ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net