More

    ಚಂದ್ರಯಾನ-3 ಅವಶೇಷಗಳು ಆಸ್ಟ್ರೇಲಿಯಾದ ಕಡಲತೀರದಲ್ಲಿ ಬಿದ್ದಿದೆಯೇ?

    ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯು ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಬಳಿಯ ಕಡಲತೀರದಲ್ಲಿ ಪತ್ತೆಯಾದ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದೆ. ಇದು ಭಾರತದ ಚಂದ್ರಯಾನ -3 ಮಿಷನ್‌ನ ಭಾಗವಾಗಿರಬಹುದು ಎಂಬ ಊಹೆ ಈಗ ವ್ಯಕ್ತವಾಗಿದೆ. ಭಾನುವಾರ ಮಧ್ಯಾಹ್ನ ಮಧ್ಯ ಪಶ್ಚಿಮ ಕರಾವಳಿಯ ಗ್ರೀನ್ ಹೆಡ್ ಟೌನ್ ಬಳಿ ನಿಗೂಢ ವಸ್ತುವು ನೀರಿನಲ್ಲಿ ತೇಲುತ್ತಿರುವುದನ್ನು ನೋಡಿದ ಆ ಪ್ರದೇಶದ ನಿವಾಸಿಗಳು ಅದನ್ನು ನೀರಿನಿಂದ ಎಳೆದು ತಂದಿದ್ದಾರೆ.

    ಇದನ್ನೂ ಓದಿ: ಯೂಟ್ಯೂಬ್​​​ ವಿಡಿಯೋ ನೋಡಿ ಹಲ್ಲುನೋವಿಗೆ ಚಿಕಿತ್ಸೆ ಪಡೆದುಕೊಂಡ ಯುವಕ ಏಕಾಏಕಿ ಸಾವು

    ಒಟ್ಟಾರೆ ಆಸ್ಟ್ರೇಲಿಯಾದ ಕಡಲತೀರದಲ್ಲಿ ಸಿಕ್ಕ ವಸ್ತುವೊಂದು ಈಗ ಭಾರೀ ಸಂಚಲನ ಮೂಡಿಸಿದೆ. ಇದು ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್‌ಹೆಡ್ ಪಟ್ಟಣದ ಕರಾವಳಿಯಲ್ಲಿ ಕಂಡುಬಂದಿದೆ. ಡ್ರಮ್ ಆಕಾರದ ವಸ್ತುವು ತಾಮ್ರದಿಂದ ಮಾಡಲ್ಪಟ್ಟಿದ್ದು, ಸ್ಥಳೀಯರು ವಿಭಿನ್ನ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಇದು ರಾಕೆಟ್‌ನಿಂದ ಹೊರ ಬಿದ್ದ ಚೂರು ಇರಬಹುದು ಎಂಬ ಚರ್ಚೆ ನಡೆಯುತ್ತಿದೆ. ಈ ವಸ್ತುವಿನಿಂದ ದೂರ ಉಳಿಯುವಂತೆ ಸ್ಥಳೀಯ ಅಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.

    ಈ ವಸ್ತು ಯಾವುದು? ಎಲ್ಲಿಂದ ಬಂತು? ಎಂದು ತಿಳಿದುಕೊಳ್ಳಲು ಆಸ್ಟ್ರೇಲಿಯಾ ಸ್ಪೇಸ್ ಏಜೆನ್ಸಿ ಕೂಡ ಫೀಲ್ಡಿಗಿಳಿದಿದೆ. ಇದು ವಿದೇಶಿ ಬಾಹ್ಯಾಕಾಶ ಉಡಾವಣೆಗೆ ಸಂಬಂಧಿಸಿದೆ ಎಂದೂ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಹಲವು ದೇಶಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ. ಏತನ್ಮಧ್ಯೆ, ಈ ವಸ್ತುವು ಭಾರತದ ಪಿಎಸ್‌ಎಲ್‌ವಿ ರಾಕೆಟ್‌ಗೆ ಸಂಬಂಧಿಸಿದೆ ಎಂದು ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.

    #ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts