More

    ಯೂಟ್ಯೂಬ್​​​ ವಿಡಿಯೋ ನೋಡಿ ಹಲ್ಲುನೋವಿಗೆ ಚಿಕಿತ್ಸೆ ಪಡೆದುಕೊಂಡ ಯುವಕ ಏಕಾಏಕಿ ಸಾವು

    ಜಾರ್ಖಂಡ್: ಸಾಮಾಜಿಕ ಮಾಧ್ಯಮ ಬಳಕೆಯಿಂದ ಅನೇಕ ಜನರು ತಮ್ಮ ಜೀವನ ಕಟ್ಟಿಕೊಂಡಿರುವುದನ್ನು ನೋಡಿದ್ದೇವೆ. ಮತ್ತೆ ಕೆಲವರು ಅದನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳದೆ ಅಪಾಯ ಎದುರಿಸುತ್ತಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ. ಇದೀಗ ಅಂತಹುದೇ ಸುದ್ದಿ ಜಾರಾಖಂಡ್‌ನಿಂದ ವರದಿಯಾಗಿದೆ.

    ಯೂಟ್ಯೂಬ್​​​​ನಲ್ಲಿ ಹಲ್ಲುನೋವಿಗೆ ಮನೆಮದ್ದು ನೋಡಿಕೊಂಡ ಜಾರ್ಖಂಡ್​​ನ ಅಜಯ್ ಮಹ್ತೋ ಅದನ್ನು ಅನುಸರಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಮೂಲಗಳ ಪ್ರಕಾರ, 26 ವರ್ಷದ ಮಹ್ತೋ ತೀವ್ರವಾದ ಹಲ್ಲು ನೋವು ಎದುರಿಸುತ್ತಿದ್ದರು. ಇದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಇದಕ್ಕೆ ಸಂಬಂಧಿಸಿದ ಯುಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿದರು. ನಂತರ ಅತಿಯಾಗಿ ಕನರ್ (ಒಲಿಯಾಂಡರ್) ಬೀಜಗಳನ್ನು ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ.

    ಮಹ್ತೋ ಯೂಟ್ಯೂಬ್ ವೀಡಿಯೋ ನೋಡಿ ಕನರ್ ಬೀಜಗಳನ್ನು ಸೇವಿಸಿದರು. ಶೀಘ್ರದಲ್ಲೇ ಅವರ ಆರೋಗ್ಯ ಹದಗೆಟ್ಟಿತು. ನಂತರ ಹಜಾರಿಬಾಗ್‌ನಲ್ಲಿರುವ ಬಿಷ್ಣುಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಆದರೆ ಅಷ್ಟರೊಳಗೆ ಮಹ್ತೋ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.

    ಮೃತನ ತಂದೆ ನುನುಚಂದ್ ಮಹ್ತೋ, ತನ್ನ ಮಗ ಹಲ್ಲುನೋವು ಪರಿಹಾರಕ್ಕಾಗಿ ಯೂಟ್ಯೂಬ್ ವಿಡಿಯೋಗಳನ್ನು ನೋಡಿದ ನಂತರ ಕನರ್ ಬೀಜಗಳನ್ನು ಸೇವಿಸಿದ್ದಾನೆ ಎಂದು ವೈದ್ಯರಿಗೆ ತಿಳಿಸಿದ್ದಾರೆ.

    ಹಜಾರಿಬಾಗ್ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ನೂತನ್ ನಗರ ಕಾಲೋನಿಯ ಲಾಡ್ಜ್‌ನಲ್ಲಿ ಮಹ್ತೋ ತಂಗಿದ್ದು, ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ಆತನ ತಂದೆ ತಿಳಿಸಿದ್ದಾರೆ. ಒಂದು ವಾರದ ಹಿಂದೆ ಅವರಿಗೆ ಮಹ್ತೋಗೆ ತೀವ್ರವಾದ ಹಲ್ಲುನೋವು ಕಾಣಿಸಿಕೊಂಡಿತ್ತು.

    ನುನುಚಂದ್, “ತನ್ನ ಮಗ ಕಠಿಣ ಪರಿಶ್ರಮ ಪಡುತ್ತಿದ್ದ. ಸಿಬಿಎಸ್‌ಇ ನಡೆಸಿದ 10 ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಹಲವಾರು ಯೂಟ್ಯೂಬ್ ವಿಡಿಯೋಗಳಿಂದ ಸ್ಫೂರ್ತಿ ಪಡೆದು, ವೈದ್ಯರನ್ನು ಸಂಪರ್ಕಿಸುವ ಬದಲು ಕನರ್ ಬೀಜಗಳನ್ನು ಸೇವಿಸಿದ ಎಂದು ದುಖಃ ವ್ಯಕ್ತಪಡಿಸಿದ್ದಾರೆ. ಹಜಾರಿಬಾಗ್ ಸಿವಿಲ್ ಸರ್ಜನ್ ಎಸ್ಪಿ ಸಿಂಗ್ ಮಾತನಾಡಿ, ಅತಿಯಾಗಿ ಮಸಾಲೆ ಸೇವಿಸುವುದು ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ.

    ಬಿಹಾರದಿಂದ ವರದಿಯಾದ ಮತ್ತೊಂದು ಘಟನೆಯಲ್ಲಿ, 25 ವರ್ಷದ ವ್ಯಕ್ತಿಯೊಬ್ಬ ಮೊಮೊ ತಿನ್ನುವ ಫುಡ್ ಚಾಲೆಂಜ್‌ನಲ್ಲಿ 150 ಮೊಮೊಗಳನ್ನು ಸೇವಿಸಿ ಸಾವನ್ನಪ್ಪಿದನು.

    ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ, ವಸ್ತುಗಳು ಬೆಂಕಿಗಾಹುತಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts