

Baba Vanga : ರಷ್ಯಾದ ಫಾರ್ ಈಸ್ಟರ್ನ್ನಲ್ಲಿ ಬುಧವಾರ (ಜುಲೈ 30) ಮುಂಜಾನೆ 8.8 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಉತ್ತರ ಪೆಸಿಫಿಕ್ ಪ್ರದೇಶದಲ್ಲಿ ಸುನಾಮಿ ಎದ್ದಿದೆ. ವಿಶ್ವದ ಪ್ರಬಲ ಭೂಕಂಪಗಳಲ್ಲಿ ಇದು ಕೂಡ ಒಂದಾಗಿದ್ದು, ಈಗಾಗಲೇ ರಷ್ಯಾ ಮತ್ತು ಜಪಾನ್ಗೆ ಸುನಾಮಿ ಬಂದಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಅಲಾಸ್ಕಾ, ಹವಾಯಿ ಮತ್ತು ನ್ಯೂಜಿಲೆಂಡ್ ಕಡೆಗೆ ದಕ್ಷಿಣಕ್ಕೆ ಇರುವ ಇತರ ಕರಾವಳಿಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಜಪಾನ್ನಲ್ಲಿ ಸುನಾಮಿ ಎಚ್ಚರಿಕೆ ಬಗ್ಗೆ ಈ ಹಿಂದೆಯೇ ಬಾಬಾ ವಂಗಾ "ಹೊಸ ಬಾಬಾ ವಂಗಾ" ಎಂದು ಕರೆಯಲ್ಪಡುವ ರಿಯೋ ತತ್ಸುಕಿ ಎಂಬುವರು ಭವಿಷ್ಯ ನುಡಿದಿದ್ದು, ಇದೀಗ ಭವಿಷ್ಯ ನಿಜವಾಯ್ತ? ಎನ್ನುವ ಪ್ರಶ್ನೆ ಉದ್ಭವವಾಗಿದೆ?
ಹೌದು, ಭವಿಷ್ಯದ ಬಗ್ಗೆ ಹೇಳುವ ಬಾಬಾ ವಂಗಾ ಬಗ್ಗೆ ಕೇಳಿಯೇ ಇರ್ತಿರಾ ಅಲ್ವಾ ಅವರು ಹೇಳಿದ ಭವಿಷ್ಯ ಸಾಮಾನ್ಯವಾಗಿ ಬಹುತೇಕ ಸಂಭವಿಸಿವೆ. ಈ ವರ್ಷದಲ್ಲಿ ದೊಡ್ಡ ವಿಪತ್ತು ಸಂಭವಿಸಲಿದೆ ಎಂದಿದ್ದರು. ಅಲ್ಲದೆ, ಜಪಾನ್ನ "ಹೊಸ ಬಾಬಾ ವಂಗಾ" ಎಂದು ಕರೆಯಲ್ಪಡುವ ರಿಯೋ ತತ್ಸುಕಿ , 2025 ರ ಜುಲೈ5ರಂದು ದೇಶಕ್ಕೆ ವಿಪತ್ತು ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿದ್ದರು.
ಈ ಭವಿಷ್ಯವಾಣಿಯು ಅವರ 2021ರ ಮಂಗಾ ದಿ ಫ್ಯೂಚರ್ ಐ ಸಾ ನಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಇದು ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡದಿದ್ದರೂ, ಅನೇಕರು ಆತಂಕಗೊಂಡು ಜುಲೈ ತಿಂಗಳ ಜಪಾನ್ ಪ್ರವಾಸ ರದ್ದುಗಗೊಳಿದ್ದರು. ಅದಕ್ಕೆ ಕಾರಣ ವಿಶೇಷವಾಗಿ ಅವರ ಹಿಂದಿನ ಭವಿಷ್ಯವಾಣಿಗಳು ನಿಜವಾಗಿರುವುದರಿಂದ. ಇದೀಗ ಕಾಕತಾಳೀಯ ಎಂಬಂತೆ ಆಕೆ ಹೇಳಿದ್ದ ಭವಿಷ್ಯ ಜು.5 ಅಲ್ಲದಿದ್ದರೂ ಜುಲೈ ಅಂತ್ಯದಲ್ಲಿ ಜಪಾನ್ ಮತ್ತು ರಷ್ಯಾದಲ್ಲಿ ಕಂಡುಬರುತ್ತಿರುವ ಸುನಾಮಿ ಎಚ್ಚರಿಕೆಗಳು ಭವಿಷ್ಯ ನಿಜವಾಯ್ತ? ಬಾಬಾ ವಂಗಾ ಮತ್ತು ರಿಯೋ ತತ್ಸುಕಿ ಭವಿಷ್ಯ ಬಗ್ಗೆ ಕೂತುಹಲ ಕೆರಳಿಸಿದೆ.
ರಿಯೋ ತತ್ಸುಕಿ ಯಾರು?
ರಿಯೋ ತತ್ಸುಕಿ ಕೇವಲ ಮಂಗಾ ಸೃಷ್ಟಿಕರ್ತರಲ್ಲ. ಅವರು ಕನಸಿನ ಆಧಾರಿತವಾಗಿ ಭವಿಷ್ಯವಾಣಿ ಹೇಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಹಿಂದೆಯೂ ಅವರು ಹಲವಾರು ಪ್ರಮುಖ ಘಟನೆಗಳನ್ನು ಭವಿಷ್ಯ ನುಡಿದಿದ್ದರು.
ರಿಯೋ ತತ್ಸುಕಿ ಹಿಂದಿನ ಭವಿಷ್ಯವಾಣಿಗಳು ವಾಸ್ತವಕ್ಕೆ ವಿಲಕ್ಷಣವಾಗಿ ಹತ್ತಿರವಾಗಿದ್ದರೂ, ತಜ್ಞರು ಇದು ಕೇವಲ ಕಾಕತಾಳೀಯ ಎಂದು ಹೇಳುತ್ತಾರೆ. ಇದರ ಹಿಂದೆ ಯಾವುದೇ ವಿಜ್ಞಾನವಿಲ್ಲ. ಆದರೆ, ನೈಸರ್ಗಿಕ ವಿಕೋಪಗಳು ಎಂದಿಗೂ ನಿರ್ಲಕ್ಷ್ಯಗೊಳಿಸಲಾಗದ ಹಿನ್ನಲೆಯಲ್ಲಿ, ಇಂತಹ ಎಚ್ಚರಿಕೆಗಳು ಸಾಮಾಜಿಕವಾಗಿ ಪ್ರಭಾವ ಬೀರುತ್ತಿವೆ. ಯುಎಸ್ಜಿಎಸ್ (USGS) ಸಂಸ್ಥೆಯ ಪ್ರಕಾರ, ಭೂಕಂಪಗಳ ವೈಜ್ಞಾನಿಕ ವಿಶ್ಲೇಷಣೆಯು ಮಾತ್ರ ನಿಖರವಾಗಿದೆ.(ಏಜೆನ್ಸೀಸ್)